ಜಲಗಾಂವ್ ನಲ್ಲಿ ಮೀನಿನಾಕಾರದ ಮಗುವಿನ ಜನ್ಮ
ಜಲಗಾಂವ್ : ಮೀನನಾಕಾರದ ವಿಚಿತ್ರ ರೂಪದ ಮಗುವೊಂದಕ್ಕೆ ಮಹಿಳೆಯೊಬ್ಬರು ಜನ್ಮ ನೀಡಿರುವ ಘಟನೆ ಜಲಗಾಂವ್ ನಲ್ಲಿ ನಡೆದಿದೆ.
ಶುಕ್ರವಾರ ಹೆರಿಗೆಗಾಗಿ ಜಲಗಾಂವ್ ಜಲ್ಲೆಯ ಧರಣಗಾಂವ್ ತಾಲೂಕಿನ ಗ್ರಾಮವೊಂದರ ಮಹಿಳೆ ಜಲಗಾಂವ್ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಳು. ಸ್ತ್ರೀರೋಗ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಸಂಜಯ್ ಬನ್ಸೋಡ್ ನೇತೃತ್ವದ ವೈದ್ಯ ತಂಡ ಯಶಸ್ವಿ ಹೆರಿಗೆ ಮಾಡಿದ್ದಾರೆ. ಈ ವೇಳೆ ಆಕೆಗೆ ವಿಚಿತ್ರದ ರೂಪದ ಮಗು ಜನನವಾಗಿದೆ.
ಈ ಮಗು 12 ತಾಸಿನವರೆಗೆ ಬದುಕುವುದಾಗಿ ವೈದ್ಯರು ಗಡುವು ನೀಡಿದ್ದರು. ಅದರಂತೆ ಶನಿವಾರ ಮಧ್ಯಾಹ್ನ ಮಗು ಮೃತಪಟ್ಟಿದೆ.
ಸದ್ಯ ಮಗುವಿನ ರೂಪಾಕಾರದ ಕುರಿತು ಅಧ್ಯಯನ ನಡೆಸಲು ಅಂಗರಚನಾಶಾಸ್ತ್ರ ವಿಭಾಗಕ್ಕೆ ದೇಹವನ್ನು ಕಳುಹಿಸಲಾಗಿದೆ. ಈ ಮಗುವಿಗೆ ಕಿಡ್ನಿ ಇರಲಿಲ್ಲ, ಈ ರೀತಿಯ ಹುಟ್ಟಿಗೆ ವೈದ್ಯಕೀಯ ಭಾಷೆಯಲ್ಲಿ ‘ಸೈರೆನೋಮೆಲಿಯಾ’ ಎಂದು ಕರೆಯಲಾಗುತ್ತದೆ ಎಂದು ವೈದ್ಯರು ತಿಳಿಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel