ಫ್ರೆಂಚ್ ಓಪನ್ 2021 – ರಫೆಲ್ ನಡಾಲ್ ಅಬ್ಬರಕ್ಕೆ ತಲೆಬಾಗಿದ ರಿಚಡ್ರ್ಸ್…!
ಆವೆ ಮಣ್ಣಿನ ಮೆಷಿನ್ ಖ್ಯಾತಿಯ ರಫೆಲ್ ನಡಾಲ್ ಅವರು ಗೆಲುವಿನೊಂದಿಗೆ ತನ್ನ 35ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡ್ರು.
ರೋಲ್ಯಾಂಡ್ ಗ್ಯಾರೋಸ್ ನಲ್ಲಿ ನಡೆಯುತ್ತಿರುವ 2021 ಫ್ರೆಂಚ್ ಓಪನ್ ಟೂರ್ನಿಯಲ್ಲಿ ಸ್ಪೇನ್ ನ ರಫೆಲ್ ನಡಾಲ್ ಅವರು 6-0, 7-5, 6-2ರಿಂದ ರಿಚರ್ಡ್ ಗಾಸ್ಕ್ವೇಟ್ ಅವರನ್ನು ಪರಾಭವಗೊಳಿಸಿದ್ರು. ಈ ಮೂಲಕ ರಫೆಲ್ ನಡಾಲ್ ಅವರು ಮೂರನೇ ಸುತ್ತು ಪ್ರವೇಶಿಸಿದ್ರು..
13 ಬಾರಿ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದುಕೊಂಡಿರುವ ನಡಾಲ್ ಅವರು ದಾಖಲೆಯ ಪ್ರಶಸ್ತಿ ಗೆಲ್ಲುವ ಹಾದಿಯಲ್ಲಿ ಮುನ್ನಡೆಯುತ್ತಿದ್ದಾರೆ. ಎರಡನೇ ಸುತ್ತಿನ ಪಂದ್ಯದಲ್ಲಿ ರಿಚರ್ಡ್ ಗಾಸ್ಕ್ವೇಟ್ ಅವರು ಪ್ರತಿಸ್ಪರ್ಧೆ ಒಡ್ಡುವ ನಿರೀಕ್ಷೆ ಇತ್ತು. ಆದ್ರೆ ನಡಾಲ್ ಅವರ ಆರ್ಭಟದ ಮುಂದೆ ರಿಚರ್ಡ್ ಅವರು ತಲ್ಲಣಗೊಂಡ್ರು. ಈಗಾಗಲೇ ಇವರಿಬ್ಬರು 17 ಬಾರಿ ಮುಖಾಮುಖಿ ಕೂಡ ಆಗಿದ್ದರು. ಅಲ್ಲದೆ 1999ರಲ್ಲಿ 14 ವಯೋಮಿತಿಯ ಟೂರ್ನಿಯಲ್ಲಿ ರಫೆಲ್ ನಡಾಲ್ ಅವರು ರಿಚರ್ಡ್ ವಿರುದ್ಧ ಸೋಲು ಅನುಭವಿಸಿದ್ದರು.
ಇನ್ನು ಪುರುಷರ ಇನ್ನೊಂದು ಸಿಂಗಲ್ಸ್ ಪಂದ್ಯದಲ್ಲಿ ಐದನೇ ಶ್ರೇಯಾಂಕಿತ ಗ್ರೀಸ್ ನ ಸ್ಟೆಫಾನೊಸ್ ಸಿಸ್ಟಿಪ್ಸ್ ಅವರು 5-7, 6-3, 7-6, 6-1ರಿಂದ ಅಮೆರಿಕಾದ ಜಾನ್ ಐಸ್ನೇರ್ ಅವರನ್ನು ಸೋಲಿಸಿ ಫ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ರು.
ಹಾಗೇ ಪುರುಷರ ಮತ್ತೊಂದು ಸಿಂಗಲ್ಸ್ ಪಂದ್ಯದ ಮೂರನೇ ಸುತ್ತಿನಲ್ಲಿ ರಷ್ಯಾದ ಡಾನಿಲ್ ಮೆಡ್ವೆಡೇವ್ ಅವರು 6-4, 6-2, 6-4ರಿಂದ ಅಮೆರಿಕಾದ ರೇಲಿಯ್ ಒಪೆಲ್ಕಾ ಅವರನ್ನು ಸುಲಭವಾಗಿ ಮಣಿಸಿದ್ರು.