Bisleri : ಉದ್ಯಮಿ ರಮೇಶ್ ಚೌಹಾಣ್ ಕನಸಿನ ಕೂಸಾದ ಪ್ಯಾಕೇಜ್ಡ್ ವಾಟರ್ ಕಂಪನಿ ಬಿಸ್ಲೇರಿ ಇಂಟರ್ನ್ಯಾಶನಲ್ ಮಾರಾಟಕ್ಕೆ???
ಉದ್ಯಮಿ ರಮೇಶ್ ಚೌಹಾಣ್ ಅವರು ತಮ್ಮ ಪುತ್ರಿ ಜಯಂತಿ ಬಿಸ್ಲೇರಿ ಇಂಟರ್ನ್ಯಾಶನಲ್ಗೆ ಸಂಬಂಧಿಸಿದ ವ್ಯವಹಾರವನ್ನು ನಿಭಾಯಿಸಲು ಆಸಕ್ತಿ ಹೊಂದಿಲ್ಲ ಎಂದು ಅವರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದರು. ಇದೀಗ ತನ್ನ ಕನಸಿನ ಕೂಸಾದ 7000 ಕೋಟಿ ರೂ ಮೌಲ್ಯದ ಪ್ಯಾಕೇಜ್ಡ್ ವಾಟರ್ ಕಂಪನಿ ಬಿಸ್ಲೇರಿ ಇಂಟರ್ನ್ಯಾಶನಲ್ಗೆ ಖರೀದಿದಾರರನ್ನು ಹುಡುಕುತ್ತಿದ್ದಾರೆ ಮತ್ತು ಟಾಟಾ ಸೇರಿ ಇನ್ನು ಹತ್ತು ಹಲವು ಉದ್ಯಮಿಗಳ ಜೊತೆ ಮಾತುಕತೆ ನಡೆಸುತ್ತಿದ್ದಾರೆ.
ಬಿಸ್ಲೆರಿ ಇಂಟರ್ನ್ಯಾಶನಲ್ನ ಪ್ರಸ್ತುತ ಉಪಾಧ್ಯಕ್ಷರಾಗಿರುವ ರಮೇಶ್ ಚೌಹಾಣ್ ಅವರು ತಮ್ಮ ಪುತ್ರಿ ಜಯಂತಿ ಉತ್ಪನ್ನ ಅಭಿವೃದ್ಧಿಯನ್ನು ಅಧ್ಯಯನ ಮಾಡಲು ಲಾಸ್ ಏಂಜಲೀಸ್ನ ಫ್ಯಾಶನ್ ಇನ್ಸ್ಟಿಟ್ಯೂಟ್ ಆಫ್ ಡಿಸೈನ್ ಮತ್ತು ಮರ್ಚಂಡೈಸಿಂಗ್ (FIDM) ಗೆ ಸೇರಿಕೊಂಡಿದ್ದಾರೆ. ತಳಮಟ್ಟದಿಂದ ಸಂಸ್ಥೆಯ ಸೇರಿದ ಜಯಂತಿ ಅನೇಕ ಸುಧಾರಣೆ ತಂದರು ಮುಂದೆ ಸೇಲ್ಸ್ ಮತ್ತು ಮಾರ್ಕೆಟಿಂಗ್ನಂತಹ ವಿಭಾಗಗಳನ್ನು ಬಲಪಡಿಸಲು ಅವರು 2011 ರಲ್ಲಿ ಮುಂಬೈ ಕಚೇರಿಯ ಜವಾಬ್ದಾರಿಯನ್ನು ವಹಿಸಿಕೊಂಡರ. ಅವರು ಬಿಸ್ಲೇರಿಯ ಹೊಸ ಬ್ರ್ಯಾಂಡ್ ಇಮೇಜ್ ಮತ್ತು ಬೆಳೆಯುತ್ತಿರುವ ಬಂಡವಾಳದ ಹಿಂದಿನ ಪ್ರೇರಕ ಶಕ್ತಿಯಾಗಿದ್ದಾರೆ ಅಂದರು ತಪ್ಪಲ್ಲ . ಆದರೆ ಇದೀಗ ಸಂಸ್ಥೆಯಿಂದ ದೂರ ಸರಿದಿರುವುದು ಉದ್ಯಮಿ ರಮೇಶ್ ಚೌಹಾಣ್ ಸಂಸ್ಥೆಯ ಮಾರಿಬಿಡುವ ಕಠಿಣ ನಿರ್ಧಾರಕ್ಕೆ ಬಂದಿದ್ದಾರೆ.
Bisleri : Businessman Ramesh Chauhan’s dream pad water company Bisleri International for sale???