ಬಿಟ್ ಕಾಯಿನ್ ಪ್ರಕರಣ | ಸುಪ್ರೀಂ ಕೋರ್ಟ್ ಹಾಲಿ ನ್ಯಾಯಾಧೀಶರ ಮೂಲಕ ತನಿಖೆ ನಡೆಸಿ
ಬೆಂಗಳೂರು : ಸುಪ್ರೀಂ ಕೋರ್ಟ್ ಹಾಲಿ ನ್ಯಾಯಾಧೀಶರ ಮೂಲಕ ಬಿಟ್ ಕಾಯಿನ್ ಪ್ರಕರಣದ ತನಿಖೆ ನಡೆಸಬೇಕೆಂದು ಎಂದು ಕಾಂಗ್ರೆಸ್ ಒತ್ತಾಯಿಸಿದೆ.
ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ನ್ಯಾಯಾಲಯಕ್ಕೆ ಸಲ್ಲಿಸಿದ ದಾಖಲೆಗಳಿಗೆ ಉತ್ತರ ನೀಡುವ ಬದಲು ಬಿಜೆಪಿ ನಾಯಕರು ವೈಯಕ್ತಿಕ ಟೀಕೆಗೆ ಇಳಿದಿರುವುದು ಏಕೆ? ಈ ತನಿಖೆ ನಡೆಯುತ್ತಿರುವುದೇ ಸತ್ಯ ಮುಚ್ಚಿಹಾಕಲು, ದೊಡ್ಡ ವ್ಯಕ್ತಿಗಳಿಗೆ ರಕ್ಷಣೆ ನೀಡಲು! ಹಾಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಯದೇ ಸತ್ಯ ಹೊರ ಬರಲು ಸಾಧ್ಯವಿಲ್ಲ ಎಂದರು.
ಜೊತೆಗೆ ಬಿಟ್ ಕಾಯಿನ್ ಹರಗಣದ ತನಿಖೆ ಸರಿಯಾಗಿ ನಡೆಯುತ್ತಿಲ್ಲ. ತನಿಖೆಯ ಯಾವ ಹಂತದಲ್ಲೂ ಪಾರದರ್ಶಕತೆ, ಸ್ಪಷ್ಟತೆ ಇಲ್ಲ. ಇದಕ್ಕೆ ಸಂಬಂಧಿಸಿದಂತೆ ಒಂದಷ್ಟು ವಿಚಾರಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ.ಬಿಜೆಪಿ ಸರ್ಕಾರ ದೇಶದ ಅತಿದೊಡ್ಡ ಕ್ರಿಪೆÇ್ಟೀ ಕರೆನ್ಸಿ ಹಗರಣದಲ್ಲಿ ಯಾರ ರಕ್ಷಣೆ ಮಾಡುತ್ತಿದೆ ಎನ್ನುವುದು ಹೊರಗೆ ಬರಬೇಕು.
ಬಿಟ್ ಕಾಯಿನ್ ಹಗರಣ ‘ವಿಚಾರವೇ ಅಲ್ಲ’ ಎಂದಾದರೆ ಬೆಂಗಳೂರು ಪೆÇಲೀಸ್ ಆಯುಕ್ತರು ಹೇಳಿಕೆ ನೀಡಿದ್ದು ಏಕೆ? ತಮ್ಮವರಿಂದಲೇ ಮಾಹಿತಿ ಸೋರಿಕೆ ಆಗುತ್ತಿದೆ, ಅಂತಹ ಸಚಿವರು, ಶಾಸಕರಿಗೆ ತಾಕೀತು ಮಾಡುವಂತೆ ಅಮಿತ್ ಶಾ ಅವರು ಕರೆ ಮಾಡಿ ಹೇಳಿದ್ದು ಏಕೆ? ದಿನಕ್ಕೊಬ್ಬರಂತೆ ಸಚಿವರು ಏಕೆ ಮಾಧ್ಯಮಗೋಷ್ಠಿಗಳನ್ನು ನಡೆಸುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಇನ್ನು ರಾಮಲಿಂಗಾರೆಡ್ಡಿ ಮಾತನಾಡಿ, ಬಿಟ್ ಕಾಯಿನ್ ಪ್ರಕರಣದ ತನಿಖೆಯ ವಿಚಾರದಲ್ಲಿ ಸರ್ಕಾರ ದ್ವಂದ್ವದಲ್ಲಿದೆ, ಮುಖ್ಯಮಂತ್ರಿಗಳು ಯಾವುದನ್ನೂ ಸ್ಪಷ್ಟವಾಗಿ ಹೇಳುತ್ತಿಲ್ಲ. ಇದೆಲ್ಲಾ ನೋಡಿದರೆ ಏನೋ ಮುಚ್ಚಿಡಲು ಬಿಜೆಪಿಯವರೆಲ್ಲ ಸಂಘಟಿತ ಪ್ರಯತ್ನ ಮಾಡುತ್ತಿರುವಂತಿದೆ.ಸುಪ್ರೀಂ ಕೋರ್ಟ್ ಹಾಲಿ ನ್ಯಾಯಾಧೀಶರ ಮೂಲಕ ತನಿಖೆ ನಡೆಸಿದರೆ ಮಾತ್ರ ಸತ್ಯ ಹೊರ ಬರಲಿದೆ. ಬಿಟ್ ಕಾಯಿನ್ ಹಗರಣ ಸಾರ್ವಜನಿಕ ಚರ್ಚೆಗೆ ಬರುವ ಮೊದಲೇ ಸರ್ಕಾರದ ಬಳಿ ಸಂಪೂರ್ಣ ಮಾಹಿತಿ ಇತ್ತು. ಆದರೂ ಪಾರದರ್ಶಕ ತನಿಖೆ ನಡೆಸಲು ಮುಂದಾಗಲಿಲ್ಲ. ಮಾಧ್ಯಮಗಳು, ನಾವೆಲ್ಲಾ ತನಿಖೆಗೆ ಒತ್ತಾಯಿಸಿದ ನಂತರವಷ್ಟೇ ಸಿಎಂ ಪ್ರತಿಕ್ರಿಯಿಸಿದರು. ಪ್ರಕರಣವನ್ನು ಸುಪ್ರೀಂ ಕೋರ್ಟ್ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.









