ಬಿಟ್ ಕಾಯಿನ್ ಗಳ ಮೂಲಕ ಟೆಸ್ಲಾ ವಾಹನಗಳ ಖರೀದಿಸಬಹುದು..! : ಎಲೋನ್ ಮಸ್ಕ್
ವಿಶ್ವದ ದೈತ್ಯ ಕಾರು ತಯಾರಿಕಾ ಸಂಸ್ಥೆಯಾಗಿರುವ ಟೆಸ್ಲಾ ಸಂಸ್ಥೆಯ ಸಂಸ್ಥಾಪಕ ಮತ್ತು CEO ಎಲೋನ್ ಮಸ್ಕ್ ಮಹತ್ವದ ಘೋಷಣೆಯೊಂದನ್ನ ಮಾಡಿದ್ದಾರೆ. ಟೆಸ್ಲಾ ವಾಹನಗಳನ್ನು ಕ್ರಿಪ್ಟೋಕರೆನ್ಸಿಯಾದ ಬಿಟ್ ಕಾಯಿನ್ ಮೂಲಕ ಖರೀದಿಸಬಹುದು ಎಂದು ಎಲೋನ್ ಮಸ್ಕ್ ಘೋಷಿಸಿದ್ದಾರೆ.
ಇನ್ನೂ ಇತ್ತೀಚೆಗಷ್ಟೇ ಟೆಸ್ಲಾ ಸಂಸ್ಥೆಯು ಬಿಟ್ ಕಾಯಿನ್ ನಲ್ಲಿ 1.5 ಬಿಲಿಯನ್ ಡಾಲರ್ ಹೂಡಿಕೆ ಮಾಡಿತ್ತು. ಇದಾದ ಬಳಿಕ ಬಿಟ್ ಕಾಯಿನ್ ರೇಟ್ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿತ್ತು. ಇದರ ಬೆನ್ನಲ್ಲೇ ಈ ರೀತಿಯಾದ ಘೋಷಣೆ ಮಾಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಎಲೋನ್ ಮಸ್ಕ್ ಟೆಸ್ಲಾ ಎಲೆಕ್ಟ್ರಿಕ್ ಕಾರುಗಳಿಗೆ ಪಾವತಿಯಾಗಿ ಬಿಟ್ ಕಾಯಿನ್ ಅನ್ನು ಸ್ವೀಕರಿಸಲು ಪ್ರಾರಂಭಿಸಿದೆ ಎಂದು ಘೋಷಿಸಿದ್ದಾರೆ. ಈ ಸೌಲಭ್ಯ ಅಮೆರಿಕಾ ಹೊರತಾಗಿ ಹೊರಗಿನ ಗ್ರಾಹಕರಿಗೆ ಸಹ ಲಭ್ಯವಾಗಲಿದೆ ಎಂದು ಎಲೋನ್ ತಿಳಿಸಿದ್ದಾರೆ.
ಏಪ್ರಿಲ್ ನಿಂದ ದ್ವಿಚಕ್ರ ವಾಹನಗಳ ಬೆಲೆ ಏರಿಕೆ..!