ಏಪ್ರಿಲ್ ನಿಂದ ದ್ವಿಚಕ್ರ ವಾಹನಗಳ ಬೆಲೆ ಏರಿಕೆ..!
1 min read
ಏಪ್ರಿಲ್ ನಿಂದ ದ್ವಿಚಕ್ರ ವಾಹನಗಳ ಬೆಲೆ ಏರಿಕೆ..!
ಏಪ್ರಿಲ್ ನಿಂದ ಹೊಸ ಹಣಕಾಸು ವರ್ಷ ಆರಂಭವಾಗಲಿದ್ದು, ಹೊಸದಾಗಿ ಬೈಕ್ ಗಳನ್ನ ಖರೀದಿ ಮಾಡಬೇಕು, ಲೋನ್ ನಲ್ಲಿ ವಾಹನ ಖರೀದಿಸಬೇಕೆಂದು ಪ್ಲಾನ್ ಮಾಡಿಕೊಂಡಿರುವವರಿಗೆ ಶಾಕಿಂಗ್ ನ್ಯೂಸ್ ಸಿಕ್ಕಿದೆ. ಹೌದು ಬ್ಯಾಂಕುಗಳಿಂದ ಸಾಲ ಪಡೆದು ದ್ವಿಚಕ್ರ ವಾಹನ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಪ್ರಮುಖವಾಗಿ ಬೇಸರದ ಸಂಗತಿ ಎಂದರೆ ಏಪ್ರಿಲ್ ತಿಂಗಳಿನಿಂದ ಬೈಕುಗಳ ಬೆಲೆ ಏರಿಕೆ ಮಾಡಲು ದ್ವಿಚಕ್ರವಾಹನ ಉತ್ಪಾದಕ ಸಂಸ್ಥೆಗಳು ಮುಂದಾಗಿವೆ.
ಇದಕ್ಕೆ ಮುಖ್ಯ ಕಾರಣ ದ್ವಿಚಕ್ರ ವಾಹನಗಳಿಗೆ ಬಳಕೆಯಾಗುವ ಲೋಹದ ಬೆಲೆಯಲ್ಲಿ ಹೆಚ್ಚಳವಾಗಿರುವುದು. ಲೋಹಗಳ ಬಳಕೆ ಹೆಚ್ಚಾದ ಪರಿಣಾಮ ಬೈಕ್ ಗಳ ಬೆಲೆಯಲ್ಲಿಯೂ ಏರಿಕೆಮಾಡಲು ಕೆಲ ದ್ವಿಚಕ್ರವಾಹನ ಉತ್ಪಾದಕ ಸಂಸ್ಥೆಗಳು ನಿರ್ಧಾರ ಮಾಡಿವೆ.