BJP | ರಾಹುಲ್ ಗಾಂಧಿಗೆ ಸರಣಿ ಪ್ರಶ್ನೆಗಳಗೈದ ಬಿಜೆಪಿ
ಬೆಂಗಳೂರು : ಬಳ್ಳಾರಿಯಲ್ಲಿ ಕಾಂಗ್ರೆಸ್ ಬೃಹತ್ ಸಮಾವೇಶ ನಡೆದಿದ್ದು, ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ಸರಣಿ ಆರೋಪಗಳನ್ನು ಗೈದಿದ್ದಾರೆ.
ಇದಕ್ಕೆ ರಾಜ್ಯ ಬಿಜೆಪಿ ಟ್ವಿಟ್ಟರ್ ನಲ್ಲಿ ತಿರುಗೇಟು ನೀಡಿದ್ದು, ಕೋವಿಡ್ ಸಂಕಷ್ಟದ ನಡುವೆ ಜಗತ್ತಿನ ಆರ್ಥಿಕತೆ ಮಕಾಡೆ ಮಲಗಿದ್ದರೂ ಭಾರತದ ಆರ್ಥಿಕತೆ ಬೆಳವಣಿಗೆಯ ವೇಗ ಅಮೇರಿಕಾ ದೇಶಕ್ಕಿಂತಲೂ ಮುಂದಿದೆಯೆಂದು ಐಎಂಎಫ್ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಇಷ್ಟರ ಮೇಲೂ, ಕಾಂಗ್ರೆಸ್ ಭಾರತದ ಸಾಧನೆಯನ್ನು ತುಚ್ಛವಾಗಿ ಕಾಣುತ್ತಿದೆ ಎಂದರೆ ಇವರು ಜೋಡಿಸಲು ಹೊರಟಿರುವುದಾದರೂ ಏನನ್ನು?

#MakeInIndia ಯೋಜನೆ ಮೂಲಕ √ ಕೋಲಾರದಲ್ಲಿ ‘ಐ ಪೋನ್’ ತಯಾರಾಗುತ್ತಿದೆ.√ ಪೆನಕೊಂಡದಲ್ಲಿ ‘ಕಿಯಾ’ ಕಾರು ತಯಾರಾಗುತ್ತಿದೆ. √ ವೈಜಾಗ್‌ನಲ್ಲಿ ‘ಶೋಮಿ’ ಮೊಬೈಲ್ ತಯಾರಾಗುತ್ತಿದೆ. ಇಟಲಿಯಿಂದ ಬಂದವರು, ತಮ್ಮ ಆಡಳಿತದ ಅವಧಿಯಲ್ಲಿ ತಮ್ಮ ಕುಟುಂಬದ ಜೋಳಿಗೆ ತುಂಬಿಸಿಕೊಂಡಿದ್ದೇ ಸಾಧನೆಯೇ?
ಕಾಂಗ್ರೆಸ್ ಸರ್ಕಾರದ ಆಡಳಿತ ಸ್ವರ್ಗದಂತಿತ್ತು ಎನ್ನುವ @RahulGandhi ಅವರೇ,
ಯುಪಿಎ ಸರ್ಕಾರ – ಸಾಮಾನ್ಯ ಜನರ ಆದಾಯ 2.5 ಲಕ್ಷ ದಾಟಿದ ಕೂಡಲೇ ಆದಾಯ ತೆರಿಗೆ ಕಟ್ಟಬೇಕಿತ್ತು.
ಮೋದಿ ಸರ್ಕಾರ – ಸಾಮಾನ್ಯ ಜನರು 5 ಲಕ್ಷ ಆದಾಯದವರೆಗೂ ತೆರಿಗೆ ಕಟ್ಟ ಬೇಕಿಲ್ಲ.
ಯಾವುದು ಸ್ವರ್ಗದ ಆಡಳಿತ, ಯಾವುದು ನರಕದ ಆಡಳಿತ?#BharatTodoYatra
— BJP Karnataka (@BJP4Karnataka) October 15, 2022
ಕಾಂಗ್ರೆಸ್ ಸರ್ಕಾರದ ಆಡಳಿತ ಸ್ವರ್ಗದಂತಿತ್ತು ಎನ್ನುವ ರಾಹುಲ್ ಗಾಂಧಿ ಅವರೇ, ಯುಪಿಎ ಸರ್ಕಾರ – ಸಾಮಾನ್ಯ ಜನರ ಆದಾಯ 2.5 ಲಕ್ಷ ದಾಟಿದ ಕೂಡಲೇ ಆದಾಯ ತೆರಿಗೆ ಕಟ್ಟಬೇಕಿತ್ತು. ಮೋದಿ ಸರ್ಕಾರ – ಸಾಮಾನ್ಯ ಜನರು 5 ಲಕ್ಷ ಆದಾಯದವರೆಗೂ ತೆರಿಗೆ ಕಟ್ಟ ಬೇಕಿಲ್ಲ.ಯಾವುದು ಸ್ವರ್ಗದ ಆಡಳಿತ, ಯಾವುದು ನರಕದ ಆಡಳಿತ ಎಂದು ಪ್ರಶ್ನಿಸಿದೆ.