ನ್ಯಾಯಮೂರ್ತಿಗಳೇನು ಸರ್ವಜ್ಞರಲ್ಲ : ಸಿ.ಟಿ.ರವಿ

1 min read
c-t-ravi

ನ್ಯಾಯಮೂರ್ತಿಗಳೇನು ಸರ್ವಜ್ಞರಲ್ಲ : ಸಿ.ಟಿ.ರವಿ

ಬೆಂಗಳೂರು : ಒಂದಲ್ಲಾ ಒಂದು ಹೇಳಿಕೆ ಮೂಲಕ ಸುದ್ದಿಯಲ್ಲಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಇದೀಗ ನ್ಯಾಯಮೂರ್ತಿಗಳ ವಿರುದ್ಧ ಅಸಮಾಧನ ಹೊರಹಾಕಿದ್ದಾರೆ.

ರಾಜ್ಯದಲ್ಲಿ ವ್ಯಾಕ್ಸಿನ್ ಕೊರತೆ ಬಗ್ಗೆ ಸರ್ಕಾರಕ್ಕೆ ಹೈಕೊರ್ಟ್ ತರಾಟೆ ತೆಗೆದುಕೊಂಡ ಬಗ್ಗೆ ವಿಧಾನಸೌಧದಲ್ಲಿ ಡಿ.ವಿ.ಸದಾನಂದಗೌಡ ಸುದ್ದಿಗೋಷ್ಠಿ ನಡೆಸಿ ವಿವರಣೆ ನೀಡುತ್ತಿದರು.

c-t-ravi

ಈ ವೇಳೆ ಮಧ್ಯೆ ಪ್ರವೇಶಿಸಿದ ಸಿ.ಟಿ. ರವಿ, ನ್ಯಾಯಮೂರ್ತಿಗಳೇನು ಸರ್ವಜ್ಞರಲ್ಲ. ವ್ಯಾಕ್ಸಿನ್ ಬಗ್ಗೆ ತಜ್ಞರ ಸಮಿತಿ ನೀಡುವ ವರದಿ ಆಧರಿಸಿಯೇ ಕೆಲಸ ಮಾಡಲಾಗುತ್ತದೆಂದು ಕೇಂದ್ರ ಸರ್ಕಾರ ಹೇಳಿದೆ. ಇದನ್ನು ಸುಪ್ರೀಂಕೋರ್ಟ್ ಸಹ ಒಪ್ಪಿದೆ ಎಂದು ಹೇಳಿದರು.

ಇತ್ತ ವ್ಯಾಕ್ಸಿನ್ ಸಂಬಂಧಿಸಿದಂತೆ ಮಾತನಾಡುತ್ತಾ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ವ್ಯಾಕ್ಸಿನ್ ಒದಗಿಸಿ ಎಂದು ಕೋರ್ಟ್ ಹೇಳುತ್ತೆ.

ಆದರೆ ಸಾಕಷ್ಟು ಪ್ರಮಾಣದಲ್ಲಿ ವ್ಯಾಕ್ಸಿನ್ ಪ್ರೊಡಕ್ಷನ್ ಆಗಲಿಲ್ಲವೆಂದ್ರೆ ನಾವೇನು ನೇಣುಹಾಕಿಕೊಳ್ಳಬೇಕಾ..? ಎಂದು ಅಸಮಾಧಾನ ವ್ಯಕ್ತಪಡಿಸಿದರು.

corona cases

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd