BJP : ಹೋರಾಟದ ಫಲದಿಂದ ನಾನು ಶಾಸಕನಾಗಿದ್ದೇನೆ – ರೇಣುಕಾಚಾರ್ಯ
ಬೆಳಗಾವಿ : ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರ , ಸಿಎಂ ದೆಹಲಿಯಿಂದ ಬಂದು ಏನಾದರೂ ಸಿಹಿ ಸುದ್ದಿ ನೀಡ್ತಾರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಶಾಸಕ ರೇಣುಕಾಚಾರ್ಯ ಅವರು , ನನಗೆ ವರ್ಷದ 365 ದಿನ ಸಿಹಿ ಸುದ್ದಿನೇ, ಕಹಿ ಎನ್ನೋದು ಗೊತ್ತೇ ಇಲ್ಲ ಎಂದಿದ್ದಾರೆ..
ಬೆಳಗಾವಿಯಲ್ಲಿ ಮಾತನಾಡಿರುವ ಅವರು , ಈಗಾಗಲೇ 2009ರಿಂದ 2012ರವರೆಗೆ ಸಚಿವನಾಗಿ ಕೆಲಸ ಮಾಡಿದ ಅನುಭವ ಇದೆ. ಸಂತೋಷದಲ್ಲೇ ಇದ್ದೀನಿ, ನಾನು ಯಾವತ್ತೂ ಸಂತೋಷ ಜೀವಿ. ಸಾವಿರಾರು, ಲಕ್ಷ ಕೋಟ್ಯಾಧೀಪತಿಗಳು ಇದ್ದಾರೆ, ಅವರು ಶಾಸಕರಾಗಾಕೇ ಆಗಿದ್ಯಾ. ಒಬ್ಬ ಸಾಮಾನ್ಯ ಮನುಷ್ಯನ ಶಾಸಕನಾಗಿ ಆಯ್ಕೆ ಮಾಡಿದ್ದಾರೆ. ನನಗೆ ಅದಕ್ಕಿಂತ ದೊಡ್ಡ ಸ್ಥಾನ ಯಾವುದೂ ಇಲ್ಲ, ಜನಾದೇಶ ಬಹಳ ಮುಖ್ಯ ಎಂದಿದ್ದಾರೆ..
ಜನಾದೇಶ ಮತ್ತೊಮ್ಮೆ ಸಿಗುವ ಆತ್ಮವಿಶ್ವಾಸ ಇದೆ. ಹೊನ್ನಾಳಿ ಕ್ಷೇತ್ರದ ಜನ ಆಯ್ಕೆ ಆದಮೇಲೆ ಮಾಧ್ಯಮಗಳು ರಾಜ್ಯಕ್ಕೆ ಪರಿಚಯಿಸಿವೆ. ಅವಕಾಶಗಳು ವಂಚಿತರಾಗಿದ್ದೇವೆ ಎಂದು ಸುಮ್ಮನಾಗಿರ್ತೀವಿ ಅಷ್ಟೇ. ಎಲ್ಲಾ ಸಾಮರ್ಥ್ಯ ಇದೆ, ಅರ್ಹತೆ ಅನುಭವ ಇದೆ ರೇಣುಕಾಚಾರ್ಯ ಬೇಡ ಅಂತಾ ಇರಬಹುದು ಏನೋ.
ಸರ್ಕಾರ ಮತ್ತು ಸಂಘಟನೆ ಎಲ್ಲ ರೀತಿಯ ಸ್ಥಾನಮಾನ ಗೌರವ ಕೊಟ್ಟಿದೆ. ಹೊನ್ನಾಳಿ ಕ್ಷೇತ್ರದಲ್ಲಿ ಟಿಕೆಟ್ ನೀಡಿದ್ದು ಸಾಮರ್ಥ್ಯ ನೋಡಿಯೇ ಕೊಟ್ಟಿದ್ದು. ಹೋರಾಟದ ಫಲದಿಂದ ನಾನು ಶಾಸಕನಾಗಿದ್ದೇನೆ ಎಂದದಿದ್ದಾರೆ.