BJP – Congress : ಸಿ.ಟಿ ರವಿಗೆ ಕಲ್ಚರ್ ಇಲ್ಲ, ಸದ್ಬುದ್ಧಿ ಇಲ್ಲ- ಸಿದ್ದರಾಮಯ್ಯ
ಬಾಗಲಕೋಟೆ : ಸಿದ್ದರಾಮಯ್ಯ ಒಬ್ಬ ಬೆರಕೆ ರಾಜಕಾರಣಿ, ಒಬ್ಬ ಮತಾಂಧ ಎಂಬ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿಕೆ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯನವರು ಪ್ರತಿಕ್ರಿಯೆ ನೀಡಿ ವಾಗ್ದಾಳಿ ನಡೆಸಿದ್ದಾರೆ..
ಆ ಸಿ.ಟಿ ರವಿಗೆ ಕಲ್ಚರ್ ಇಲ್ಲ, ಸದ್ಬುದ್ಧಿ ಇಲ್ಲ, ಇರೋದೆಲ್ಲಾ ಬರೀ ಗೂಂಡಾ ಸಂಸ್ಕೃತಿ ಎಂದು ಕಿಡಿಕಾರಿದ್ದಾರೆ..
ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆರಕೆ ಅಂದ್ರೆ ಏನೂ ಅಂತಾನೇ ನನಗೆ ಗೊತ್ತಿಲ್ಲ. ಆ ಸಿ.ಟಿ ರವಿಗೆ ಕಲ್ಚರ್ ಇಲ್ಲ, ಗೂಂಡಾ ಸಂಸ್ಕೃತಿ ಇರೋದು ಅವನಿಗೆ.
ಅವರೆಲ್ಲಾ ಮನುಷ್ಯತ್ವ ಇಲ್ಲದೇ ಇರೋರು, ಬಾಯಿಗೆ ಬಂದಂತೆ ಮಾತಾಡ್ತಾರೆ. ಸಿ.ಟಿ ರವಿಗೆ ಮನುಷ್ಯತ್ವ, ಸದ್ಬುದ್ಧಿ ಯಾವುದೂ ಇಲ್ಲ ಎಂದು ಕಿಡಿಕಾರಿದ್ದಾರೆ.