BJP – Congress ಎರಡೂ ಪಕ್ಷಗಳೂ ರೈತರಿಗೆ ಮಾರಕ – ಹೆಚ್ ಡಿ ಕೆ
ಬಿಜೆಪಿ-ಕಾಂಗ್ರೇಸ್ ಎರಡೂ ರೈತರಿಗೆ ಮಾರಕವಾಗಿರುವ ಪಕ್ಷ. ಎರಡೂ ರಾಷ್ಟ್ರೀಯ ಪಕ್ಷ ತಿರಸ್ಕರಿಸಿ ಪ್ರಾದೇಶಿಕ ಪಕ್ಷಕ್ಕೆ ಒತ್ತು ಕೊಡಿ.. ಜನರ ನೋವಿಗೆ ಅತ್ಯವಶ್ಯಕ ವಾದ ಪಕ್ಷ ಅಂದ್ರೆ ಅದು ಜೆಡಿಎಸ್ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಮಂಡ್ಯದ ಮರಳಿಗ ಗ್ರಾಮದಲ್ಲಿ ಹೇಳಿದ್ದಾರೆ..
ಇದೇ ವೇಳೆ ಮಂಡ್ಯ ಜಿಲ್ಲೆಯ ಜನರ ಪ್ರೀತಿ ವಿಶ್ವಾಸ ಕಡಿಮೆಯಾಗಿಲ್ಲ. ಜನರ ಪ್ರೀತಿ ಮೊದಲಿಗಿಂತಲು ದುಪ್ಪಟ್ಟು ಹೆಚ್ಚಾಗಿದೆ. ಏಳು ವರ್ಷದಲ್ಲಿ ಕೇಂದ್ರ ಸರ್ಕಾರ ಜನಕ್ಕೆ ಏನು ಅನುಕೂಲ ಮಾಡಿಲ್ಲ. ರೈತರಿಗೆ ಏನಾದ್ರು ಅನುಕೂಲ ಮಾಡಿಕೊಟ್ರಾ.. ಇವಾಗ ಏನು ಬೇಕಾದ್ರು ವಿರೋಧ ಪಕ್ಷದವರು ಮಾತನಾಡಬಹುದು. ಚುನಾವಣೆಯಲ್ಲಿ ಜನರೇ ತೀರ್ಮಾನ ಮಾಡ್ತಾರೆ ಎಂದಿದ್ದಾರೆ..
ಮುಂದುವರೆದು ಜೆಡಿಎಸ್ ಭದ್ರಕೋಟೆಯನ್ನ ಯಾರಿಂದಲೂ ಛಿದ್ರ ಮಾಡಲು ಸಾಧ್ಯವಿಲ್ಲ. ಭದ್ರಕೋಟೆ ಬಿಗಿ ಮಾಡಲು ಜನರು, ಕಾರ್ಯಕರ್ತರು ಇದ್ದಾರೆ. ಜನರ ನೋವಿಗೆ ಅತ್ಯವಶ್ಯಕ ವಾದ ಪಕ್ಷ ಜೆಡಿಎಸ್ ಬಿಜೆಪಿ-ಕಾಂಗ್ರೇಸ್ ರೈತರಿಗೆ ಮಾರಕವಾಗಿರುವ ಪಕ್ಷ.. ರಾಷ್ಟ್ರೀಯ ಪಕ್ಷ ತಿರಸ್ಕರಿಸಿ ಪ್ರಾದೇಶಿಕ ಪಕ್ಷಕ್ಕೆ ಒತ್ತು ಕೊಡಿ ಎಂದಿದ್ಧಾರೆ..
ಇನ್ನೂ ಮಂಡ್ಯದಲ್ಲಿ ರೈತರ ಹೋರಾಟದ ವಿಚಾರವಾಗಿ ಮಾತನಾಡಿರೋ ಅವರು ಈ ಸರ್ಕಾರ ಯಾವುದೇ ಕಾರಣಕ್ಕೂ ರೈತರ ಬೇಡಿಕೆ ಈಡೇರಿಸಲ್ಲ. ಉಸ್ತುವಾರಿ ಸಚಿವರು ಮಂತ್ರಿಗಳು ಮಾತನಾಡ್ತಿಲ್ಲ. ಕಾರ್ಖಾನೆ ಮಾಲೀಕರೆಲ್ಲ ಬಿಜೆಪಿ ಮಂತ್ರಿಗಳಾಗಿದ್ದಾರೆ.. ಎಲ್ಲಿ ರೈತರ ಬೇಡಿಕೆ ಈಡೇಸ್ತಾರೆ ಎಂದು ಕಿಡಿಕಾರಿದ್ದಾರೆ..
BJP – Congress , H D kumaraswami slams bloth parties