ನವದೆಹಲಿ : ಬಿಜೆಪಿ ಆಡಳಿತದಲ್ಲಿ ದೇಶದ ಗೌರವ ಹಾಳಾಯಿತು ಎಂದು ಭಾರತೀಯ ಜನತಾ ಪಾರ್ಟಿ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ವಾಗ್ದಾಳಿ ನಡೆಸಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಅವರು, ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಅಸಹಾಯಕರಾಗಿದ್ದಾರೆ. ಅವರು ಸರ್ಕಾರದ ಮೇಲೆ ನಿಯಂತ್ರಣ ಕಳೆದುಕೊಂಡಿದ್ದಾರೆ. ಸರ್ಕಾರದ ಎಲ್ಲ ವೈಫಲ್ಯಗಳನ್ನು ಮುಚ್ಚಿಡಲು ಪ್ರಯತ್ನ ಮಾಡಲಾಗುತ್ತಿದೆ ಎಂದು ಗುಡುಗಿದರು.
ಇದೇ ವೇಳೆ ಕಿತ್ತೂರಿನಲ್ಲಿ ಸೈಕಲ್ ಮೇಲೆ ಶವ ಸಾಗಣೆ ಬಗ್ಗೆ ಮಾತನಾಡಿ ಟ್ರಬಲ್ ಶೂಟರ್, ಕೊರೊನಾ ಮತ್ತು ಪ್ರವಾಹ ಸಂಧರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯಲ್ಲಿ ಇರಬೇಕು ಎಂದು ಸಿಎಂ ಸೂಚನೆ ನೀಡಿದ್ದಾರೆ. ಆದರೆ ಸಿಎಂ ಆದೇಶವನ್ನು ಪಾಲಿಸಿಲ್ಲ. ಬೆಳಗಾವಿಯಲ್ಲಿ ಸೈಕಲ್ ಮೇಲೆ ಕೊರೊನಾ ಸೋಂಕಿತ ವ್ಯಕ್ತಿಯ ಮೃತ ದೇಹವನ್ನು ಸಾಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಮೊದಲು ಬಳ್ಳಾರಿಯಲ್ಲಿ ಹೆಣ ಬಿಸಾಕಿದರು. ಈಗ ಬೆಳಗಾವಿಯ ಸರದಿ, ಬಿಜೆಪಿ ಆಡಳಿತದಲ್ಲಿ ದೇಶದ ಗೌರವ ಹಾಳಾಯಿತು. ನಿಮ್ಮ ಹೆಣ, ನಮ್ಮ ಹೆಣ ಹೀಗಾಗಿದ್ರೆ ಸಹಿಸುತ್ತಿದ್ದವಾ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.








