National – 2019-20 ರಲ್ಲಿ 4847.78 ಕೋಟಿ ಆಸ್ತಿ ಮೌಲ್ಯ ಘೋಷಿಸಿದ ಬಿಜೆಪಿ…
ರಾಷ್ಟ್ರೀಯ ಬಿಜೆಪಿ ಪಕ್ಷ 2019-20ನೇ ಹಣಕಾಸು ವರ್ಷದಲ್ಲಿ ರೂ 4,847.78 ಕೋಟಿ ಮೌಲ್ಯದ ಆಸ್ತಿಯನ್ನು ಘೋಷಿಸಿಕೊಂಡಿದೆ. ಚುನಾವಣಾ ಸುಧಾರಣೆಗಳ ಅಡ್ವೊಕಸಿ ಗ್ರೂಪ್ ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಶುಕ್ರವಾರ ಬಿಡುಗಡೆ ಮಾಡಿದ ವರದಿ ತಿಳಿದುಬಂದಿದೆ.
ಏಳು ರಾಷ್ಟ್ರೀಯ ಪಕ್ಷಗಳ ಪೈಕಿ ಬಿಎಸ್ಪಿ 698.33 ಕೋಟಿ ಆಸ್ತಿಯೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಕಾಂಗ್ರೆಸ್ (588.16 ಕೋಟಿ) ಮೂರನೇ ಸ್ಥಾನದಲ್ಲಿದೆ.
2019-20ರಲ್ಲಿ ಏಳು ರಾಷ್ಟ್ರೀಯ ಮತ್ತು 44 ಪ್ರಾದೇಶಿಕ ಪಕ್ಷಗಳು ಘೋಷಿಸಿದ ಒಟ್ಟು ಆಸ್ತಿಯಲ್ಲಿ ರಾಷ್ಟ್ರೀಯ ಪಕ್ಷಗಳು 6,988.57 ಕೋಟಿ ಮತ್ತು ಪ್ರಾದೇಶಿಕ ಪಕ್ಷಗಳು 2,129.38 ಕೋಟಿ ರೂಪಾಯಿ ಆಸ್ತಿಯನ್ನ ಘೋಷಿಸಿಕೊಂಡಿವೆ.
ಪ್ರಾದೇಶಿಕ ಪಕ್ಷಗಳ ಪೈಕಿ, ಸಮಾಜವಾದಿ ಪಕ್ಷ – ರೂ 563.47 ಕೋಟಿ ಯೊಂದಿಗೆ ಹೆಚ್ಚು ಆಸ್ತಿಯನ್ನ ಹೊಂದಿದೆ, ಟಿಆರ್ಎಸ್ ರೂ. 301.47 ಕೋಟಿ ಮತ್ತು ಎಐಎಡಿಎಂಕೆ ರೂ. 267.61 ಕೋಟಿ ಮೌಲ್ಯದ ಆಸ್ತಿ ಹೊಂದಿದೆ.
2019-20 ರಲ್ಲಿ, ಕಾಂಗ್ರೆಸ್ ಹೆಚ್ಚಿನ ಒಟ್ಟು ಹೊಣೆಗಾರಿಕೆಗಳನ್ನು ಘೋಷಿಸಿದೆ – ರೂ 49.55 ಕೋಟಿ, ಅಥವಾ ಒಟ್ಟು ಹೊಣೆಗಾರಿಕೆಗಳ 66.72% – ನಂತರ ಟಿಎಂಸಿ ರೂ 11.32 ಕೋಟಿ.
2019-20ರ ಅವಧಿಯಲ್ಲಿ, ರಾಷ್ಟ್ರೀಯ ಪಕ್ಷಗಳ 5970.59 ಕೋಟಿ ರೂಪಾಯಿ ಮೊತ್ತದ 65.48% ಆಸ್ತಿಗಳು ಎಫ್ಡಿ ಅಡಿಯಲ್ಲಿವೆ ಎಂದು ವರದಿ ಹೇಳಿದೆ. 2019-20ರಲ್ಲಿ ಏಳು ರಾಷ್ಟ್ರೀಯ ಮತ್ತು 44 ಪ್ರಾದೇಶಿಕ ಪಕ್ಷಗಳು ಘೋಷಿಸಿದ ಒಟ್ಟು ಹೊಣೆಗಾರಿಕೆಗಳು 134.93 ಕೋಟಿ ರೂ.