ದೇಶದಲ್ಲಿ ದಲಿತ ರಾಷ್ಟ್ರಪತಿಯನ್ನು ಆಯ್ಕೆ ಮಾಡಿದ್ದು ಬಿಜೆಪಿ : ಕಟೀಲ್
ಚಾಮರಾಜನಗರ : ಇಂದು ದೇಶದಲ್ಲಿ ದಲಿತ ರಾಷ್ಟ್ರಪತಿಯನ್ನ ಆಯ್ಕೆ ಮಾಡಿದ್ದು, ಬಿಜೆಪಿ. ನಮ್ಮ ಪಕ್ಷ ನುಡಿದಂತೆ ನಡೆದುಕೊಳ್ಳುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಚಾಮರಾಜನಗರದ ಅಂಬೇಡ್ಕರ್ ಭವನದಲ್ಲಿ ಇಂದು ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯಿತು. ಸಭೆಯಲ್ಲಿ ಭಾಗಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಕಟೀಲ್, ಬಿಜೆಪಿ ನುಡಿದಂತೆ ನಡೆದ ಪಕ್ಷವಾಗಿದೆ.
ಹೀಗಾಗಿ ಎಸ್ಟಿ ಸಮುದಾಯಕ್ಕೆ ವಿಶೇಷ ಸ್ಥಾನಮಾನ ನೀಡಿದೆ. ಹೀಗಾಗಿ ಎಸ್ಸಿ, ಎಸ್ಟಿ ಸಮುದಾಯವರು ವಿಶ್ವಾಸವಿಟ್ಟು ಪಕ್ಷಕ್ಕೆ ಬರುತ್ತಿದ್ದಾರೆ.
ರಾಜ್ಯದಲ್ಲಿ ಸಿಎಂ ಎಸ್ಟಿ ಸಮುದಾಯವನ್ನು ಪ್ರೋತ್ಸಾಹಿಸಿ 11 ಜನರನ್ನು ನಿಗಮದ ಅಧ್ಯಕ್ಷರನ್ನಾಗಿ ಮಾಡಿದ್ದಾರೆ.
ಇಬ್ಬರನ್ನು ಮಂತ್ರಿಗಳನ್ನಾಗಿ ಮಾಡಿದ್ದಾರೆ. ಬಿಜೆಪಿಯಲ್ಲಿ ಇಬ್ಬರು ಎಂಪಿ ಹಾಗೂ 7 ಮಂದಿಗೆ ಎಂಎಲ್‍ಎ ಸ್ಥಾನಗಳನ್ನು ಕೊಟ್ಟಿದ್ದೇವೆ ಎಂದು ಹೇಳಿದರು.
ರಾಮುಲುಗೆ ಡಿಸಿಎಂ ಸ್ಥಾನ : ಕಟೀಲ್ ಕೆಂಡಾಮಂಡಲ
ಇನ್ನು ಸಭೆಯಲ್ಲಿ ನಾವು ಎಸ್ ಟಿ ಸಮುದಾಯಕ್ಕೆ ವಿಶೇಷ ಸ್ಥಾನಮಾನ ನೀಡಿದ್ದೇವೆ ಎಂದು ಕಟೀಲ್ ಹೇಳುತ್ತಿದ್ದಂತೆ, ಬಿಜೆಪಿ ಕಾರ್ಯಕರ್ತರೊಬ್ಬರು ಎಸ್ಟಿ ಸಮುದಾಯಕ್ಕೆ ಡಿಸಿಎಂ ಹುದ್ದೆ ನೀಡಿ, ಶ್ರೀರಾಮುಲು ಅವರನ್ನು ಉಪಮುಖ್ಯಮಂತ್ರಿ ಮಾಡಿ ಎಂದು ಕೇಳಿದರು.
ಇದರಿಂದ ಕೆಂಡಾಮಂಡಲರಾದ ಕಟೀಲ್ ನೀವು ಕಾರ್ಯಕಾರಿಣಿ ಸಭೆಗೆ ಬಂದಿದ್ದೀರಿ ಎಂದು ಬಾಯಿ ಮುಚ್ಚಿಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel