BJP | ಹೆಚ್ ಡಿಕೆ ಹೊಂದಾಣಿಕೆ ರಾಜಕಾರಣದ ಪಿತಾಮಹ
ಬೆಂಗಳೂರು : ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೊಂದಾಣಿಕೆ ರಾಜರಾಣದ ಪಿತಾಮಹ ಎಂದು ರಾಜ್ಯ ಬಿಜೆಪಿ ಘಟಕ ಕುಟುಕಿದೆ.
ರಾಜ್ಯದಿಂದ ಬಿಜೆಪಿಯನ್ನು ಕಿತ್ತುಹಾಕಬೇಕು ಎಂಬ ಹೆಚ್ ಡಿ ಕೆ ಹೇಳಿಕೆ ರಾಜ್ಯ ಬಿಜೆಪಿ ಘಟಕ ಟ್ವಿಟ್ಟರ್ ನಲ್ಲಿ ಕಿಡಿಕಾರಿದೆ.
ಬಿಜೆಪಿ ತನ್ನ ಟ್ವಿಟ್ಟರ್ ನಲ್ಲಿ…
ಮಾಜಿ #LuckyDipCMHDK ಅವರೇ, ಹೊಂದಾಣಿಕೆ ರಾಜಕಾರಣದ ಪಿತಾಮಹರಾದ ನೀವು ಕನ್ನಡಿಗರ ಹೆಸರನ್ನೇಕೆ ದುರ್ಬಳಕೆ ಮಾಡಿಕೊಳ್ಳುತ್ತೀರಿ?ಕಿತ್ತು ಹಾಕುವುದಕ್ಕೆ ಬಿಜೆಪಿ ನಿಮ್ಮ ಒತ್ತುವರಿ ಜಮೀನಿನಲ್ಲಿ ಬೆಳೆದ ಕಳೆಯೂ ಅಲ್ಲ, ಅಪ್ಪ ಮಕ್ಕಳ ಪಕ್ಷವೂ ಅಲ್ಲ.ಭಾರತೀಯ ಜನತಾ ಪಾರ್ಟಿ ಜಗತ್ತಿನ ಅತ್ಯಂತ ದೊಡ್ಡ ರಾಜಕೀಯ ಪಕ್ಷ ಎನ್ನುವುದನ್ನು ನೆನಪಿಡಿ.
https://twitter.com/BJP4Karnataka/status/1513442091866914820?s=20&t=pb0IMpqnAh-mrXfAzITWSA
ರಾಜ್ಯದಲ್ಲಿ ಬಿಜೆಪಿ ಬೆಳೆದು ನಿಂತಿದ್ದು ಸಾಂದರ್ಭಿಕ ಶಿಶುವಿನ ರೀತಿಯಲ್ಲ. ದಶಕಗಳ ಹೋರಾಟದ ಇತಿಹಾಸ ನಮಗಿದೆ. ಮಾಜಿ #LuckyDipCMHDK ಅವರೇ, ಕಿತ್ತು ಹಾಕುತ್ತೇನೆ, ಗುಡ್ಡೆ ಹಾಕುತ್ತೇನೆ ಎಂಬ ಹರಕು ಬಾಯಿಯ ಪದಗಳಿಗಾಗಿ ಮಂಡ್ಯದ ಕನ್ನಡಿಗರು ಪುತ್ರರತ್ನನಿಗೆ ನೀಡಿದ ಉಡುಗೊರೆ ನೆನಪಿಸಿಕೊಳ್ಳಿ. ಉಡಾಫೆ ಮಾತಾಡುವ ಮುನ್ನ ಎಚ್ಚರವಿರಲಿ!
https://twitter.com/BJP4Karnataka/status/1513443738005041158?s=20&t=pb0IMpqnAh-mrXfAzITWSA
ಮಾಜಿ #LuckyDipCMHDK ಅವರೇ, √ ಜೆಡಿಎಸ್ ಪಕ್ಷದಲ್ಲಿ ಒಂದು ಕುಟುಂಬದಿಂದ ಎರಡು ಟಿಕೆಟ್ ಮಾತ್ರ ಎಂಬ ಘೋಷಣೆ ಮಾಡುವ ಸಾಮರ್ಥ್ಯ ಇದೆಯೇ? √ ಜೆಡಿಎಸ್ ಪಕ್ಷದ ದಲಿತ ಸಿಎಂ ಅಭ್ಯರ್ಥಿ ಯಾರು? √ ಅಧಿಕಾರಕ್ಕಾಗಿ #ಕಣ್ಣೀರಧಾರೆ ಸುರಿಸಿ ಈಗ ಈಗ #ಜನತಾಜಲಧಾರೆ ಎಂಬ ನಾಟಕ ಮಾಡುತ್ತಿರುವುದೇಕೆ ಎಂದು ಪ್ರಶ್ನೆ ಮಾಡಿದೆ. bjp-H DK is the father of compatible politics







