BJP | ಸಿದ್ದರಾಮಯ್ಯರ ಅವಕಾಶವಾದಿ ರಾಜಕಾರಣವನ್ನು ಕರ್ನಾಟಕ ಕ್ಷಮಿಸದು
ಬೆಂಗಳೂರು : ಸಿದ್ದರಾಮಯ್ಯ ಅವರ ಅವಕಾಶವಾದಿ ರಾಜಕಾರಣವನ್ನು ಕರ್ನಾಟಕ ಎಂದಿಗೂ ಕ್ಷಮಿಸದು ಎಂದು ರಾಜ್ಯ ಬಿಜೆಪಿ ಘಟಕ ಕಿಡಿಕಾರಿದೆ.
ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿರುವ ಬಿಜೆಪಿ, ವೀರಶೈವ ಲಿಂಗಾಯತ ಧರ್ಮ ವಿಭಜನೆ ವಿಚಾರದಲ್ಲಿ “ನನ್ನನ್ನು ದಾರಿ ತಪ್ಪಿಸಿದರು” ಎಂದು #ಧರ್ಮವಿಭಜಕಸಿದ್ದರಾಮಯ್ಯ ಹೇಳಿದ್ದಾರೆ. ಸಿದ್ದರಾಮಯ್ಯನವರೇ, ನಿಮ್ಮ ದಾರಿ ತಪ್ಪಿಸಿದವರು ನಿಮ್ಮ ಜೊತೆಯಲ್ಲೇ ಇದ್ದುಕೊಂಡು ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದಾರೆ. ಅವರಿಂದ ರಾಜೀನಾಮೆ ಪಡೆಯುತ್ತೀರಾ?
ಧರ್ಮ ವಿಭಜನೆಗೆ ಕೈ ಹಾಕಿದ್ದು ತಪ್ಪು ಎಂದು ಈ ಹಿಂದೆ ಡಿ.ಕೆ.ಶಿವಕುಮಾರ್ ಹೇಳಿದ್ದರು. ಈಗ ಅದೇ ಹಾದಿಯನ್ನು ಸಿದ್ದರಾಮಯ್ಯ ತುಳಿದಿದ್ದಾರೆ. ಚುನಾವಣೆಯ ಸಾಲಿನಲ್ಲಿ ಪಶ್ಚತ್ತಾಪದ ಮಾತಗಳನ್ನಾಡುತ್ತಿರುವುದು ಮತ ಗಳಿಕೆಯ ಭಾಗವೇ? ಸಿದ್ದರಾಮಯ್ಯ ಅವರ ಅವಕಾಶವಾದಿ ರಾಜಕಾರಣವನ್ನು ಕರ್ನಾಟಕ ಎಂದಿಗೂ ಕ್ಷಮಿಸದು.

ವೀರಶೈವ ಲಿಂಗಾಯತ ಸಮುದಾಯಕ್ಕೆ ಕಾಂಗ್ರೆಸ್ ಹಲವು ವರ್ಷಗಳಿಂದ ಅಪಮಾನ ಮಾಡುತ್ತಲೇ ಬಂದಿದೆ. ನಿಜಲಿಂಗಪ್ಪ, ವೀರೇಂದ್ರ ಪಾಟೀಲರಿಗೆ ರಾಜಕೀಯವಾಗಿ ಅನ್ಯಾಯ ಮಾಡಿದ್ದ ಕಾಂಗ್ರೆಸ್, ಧರ್ಮದ ವಿಚಾರದಲ್ಲಿ ವೀರಶೈವ-ಲಿಂಗಾಯತ ಸಮುದಾಯದ ಭಾವನೆ ಕೆಣಕುತ್ತಿದೆ. ಬಸವಣ್ಣನ ಹಾದಿಯಲ್ಲಿ ನಡೆಯುತ್ತಿದ್ದೇವೆ ಎನ್ನುವವರು ಮಾಡುತ್ತಿರುವುದೇನು?
ಧರ್ಮ ವಿಭಜನೆಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರ ಪಶ್ಚಾತಾಪ ಪ್ರಾಯಶ್ಚಿಕತೆಯಲ್ಲ, ಪ್ರಯೋಜನ ಪಡೆಯಲು ಮಾಡಿದ ಸಂಕಲ್ಪ. ಚುನಾವಣೆ ಸನಿಹದಲ್ಲಿರುವಾಗ ಧರ್ಮ ವಿಭಜನೆಯ ಸೂತ್ರದಾರ ಪಶ್ಚಾತಾಪ ಪಟ್ಟಿರುವುದರಲ್ಲಿ ರಾಜಕೀಯವಿದೆಯೇ ಹೊರತು ಯಾವುದೇ ವಿಷಾದವಿಲ್ಲ ಎಂದು ಬರೆದುಕೊಂಡಿದೆ.








