BJP | 1998ರಲ್ಲಿ ಬಿಜೆಪಿ ಚುನಾವಣೆ ಗೆದ್ದ ರಹಸ್ಯ ಬಯಲು

1 min read
bjp-leader-muniraju-reveals-fake-vote-in-1998-by-poll saaksha tv

bjp-leader-muniraju-reveals-fake-vote-in-1998-by-poll saaksha tv

BJP | 1998ರಲ್ಲಿ ಬಿಜೆಪಿ ಚುನಾವಣೆ ಗೆದ್ದ ರಹಸ್ಯ ಬಯಲು

ಬೆಂಗಳೂರು : ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇದೆ.  

ಮುಂದಿನ ಚುನಾವಣೆಗಾಗಿ ರಾಜಕೀಯ ಪಕ್ಷಗಳು ಈಗಾಗಲೇ ತಮಗೆಬೇಕಾದ ಸರಕುಗಳನ್ನು ರೆಡಿ ಮಾಡಿಕೊಳ್ಳುತ್ತಿದ್ದಾರೆ.

ಆಡಳಿತರೂಢ ಬಿಜೆಪಿ ವಿರುದ್ಧ ವಿಪಕ್ಷಗಳು ಈಗಾಗಲೇ ಸಾಕಷ್ಟು ಆರೋಪಗಳನ್ನು ಮಾಡಿವೆ. ಇದಕ್ಕೆ ಪ್ರತಿಯಾಗಿ ಬಿಜೆಪಿ ಕೂಡ ವಿಪಕ್ಷಗಳ ಮೇಲೆ ಕಿಡಿಕಾರುತ್ತಲೇ ಇದೆ.

ಇದರ ನಡುವೆ  1998ರಲ್ಲಿ ಬಿಜೆಪಿ ಚುನಾವಣೆ ಗೆದ್ದ ರಹಸ್ಯವನ್ನು ಬಿಜೆಪಿ ಮುಖಂಡನೇ ಬಹಿರಂಗ ಪಡಿಸಿದ್ದಾರೆ.

bjp-leader-muniraju-reveals-fake-vote-in-1998-by-poll saaksha tv
bjp-leader-muniraju-reveals-fake-vote-in-1998-by-poll saaksha tv

ಕಾರ್ಯಕ್ರಮವೊಂದರಲ್ಲಿ ದಾಸರಹಳ್ಳಿ ಮಾಜಿ ಶಾಸಕ ಮುನಿರಾಜು ನೀಡಿರುವ ಹೇಳಿಕೆವೊಂದು ಸದ್ಯ ರಾಜ್ಯ ರಾಜಕಾರಣದಲ್ಲಿ ಭಾರಿ ಸದ್ದು ಮಾಡುತ್ತಿದೆ.  ಜೊತೆಗೆ ಸಾಕಷ್ಟು ಚರ್ಚೆಗೂ ಗ್ರಾಸವಾಗುತ್ತಿದೆ.

ಮಾಜಿ ಶಾಸಕ ಮುನಿರಾಜು ಕಾರ್ಯಕ್ರಮದಲ್ಲಿ ಮಾತನಾಡುತ್ತಾ, 1998ರಲ್ಲಿ ನಮ್ಮ ಪಕ್ಷ ಚುನಾವಣೆಯಲ್ಲಿ‌ ಗೆದ್ದಿದ್ದು ಹೇಗೆ..? ಉತ್ತರಹಳ್ಳಿಯಲ್ಲಿ ಅಶೋಕ್ ಸ್ಪರ್ಧಿಸಿದ್ದರು.

ಆಗ ಯಲಹಂಕದಿಂದ 1,000 ಕಾರ್ಯಕರ್ತರು ಬಂದಿದ್ದರು. ಒಬ್ಬೊಬ್ಬರು 5ರಿಂದ10 ಮತ ಹಾಕಿದ್ದರು. ಹೀಗಾಗಿ ಅವತ್ತು ಅಶೋಕ್ ಗೆದ್ದರು ಎಂದು ಬಹಿರಂಗ ಹೇಳಿಕೆ ನೀಡಿದ್ದಾರೆ.

ಇದು ವಿಪಕ್ಷಗಳಿಗೆ ಆಹಾರವಾಗಿದ್ದು, ಬಿಜೆಪಿ ವಿರುದ್ಧ ಮುಗಿಬಿದ್ದಿದ್ದಾರೆ. bjp-leader-muniraju-reveals-fake-vote-in-1998-by-poll

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd