ನಾಗಪುರ: ಬಿಜೆಪಿ ಮುಖಂಡನ ಮಗ ಅಪಘಾತ ಮಾಡಿ ಪೊಲೀಸರ ಅತಿಥಿಯಾಗಿರುವ ಘಟನೆ ನಡೆದಿದೆ.
ನಾಗಪುರದಲ್ಲಿ ಮಹಾರಾಷ್ಟ್ರ (Maharashtra) ಬಿಜೆಪಿ ಅಧ್ಯಕ್ಷ ಚಂದ್ರಶೇಖರ ಬವಾಂಕುಲೆ (Chandrashekhar Bawankule) ಪುತ್ರನ ಒಡೆತನದ ಆಡಿ ಕಾರು ಹಲವಾರು ವಾಹನಗಳಿಗೆ ಡಿಕ್ಕಿ ಹೊಡೆದಿದೆ.
ಬಿಜೆಪಿ ಅಧ್ಯಕ್ಷ ಚಂದ್ರಶೇಖರ ಬವಾಂಕುಲೆ ಪುತ್ರ ಸಾಂಕೇತ್ ಬವಾಂಕುಲೆ ಸೇರಿದಂತೆ ಮೂವರು ಘಟನೆಯ ನಂತರ ಪರಾರಿಯಾಗಿದ್ದಾರೆ. ಆದರೆ, ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿದ್ದಾರೆ ಎನ್ನಲಾಗಿದೆ.
ಕಾರಿನಲ್ಲಿದ್ದ ಯುವಕರು ಮದ್ಯ ಸೇವಿಸಿದ್ದರು ಎನ್ನಲಾಗಿದೆ. ಆಡಿ ಕಾರು ದೂರುದಾರ ಜಿತೇಂದ್ರ ಸೋಕಾಂಬ್ಲೆ ಕಾರಿಗೆ ಮೊದಲು ಡಿಕ್ಕಿ ಹೊಡೆದು, ನಂತರ ಬೈಕ್ ಗೆ ಡಿಕ್ಕಿ ಹೊಡೆದಿದೆ. ಬೈಕ್ ಸವಾರರಿಬ್ಬರಿಗೂ ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಧರಂಪೇತ್‌ನ ಬಾರ್ ನಿಂದ ಹಿಂತಿರುಗುವ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದ್ದು, ಬಂಧಿತರಿಬ್ಬರನ್ನು ಹೊರತು ಪಡಿಸಿ ಸಾಂಕೇತ್ ಬವಾಂಕುಲೆ ಸೇರಿದಂತೆ ಇನ್ನೂ ಮೂವರು ಕಾರಿನಲ್ಲಿದ್ದರು ಎನ್ನಲಾಗಿದೆ. ಈ ಕಾರು ಹಲವಾರು ವಾಹನಗಳಿಗೆ ಡಿಕ್ಕಿ ಹೊಡೆದಿದ್ದು, ಟಿ-ಪಾಯಿಂಟ್ ನಲ್ಲಿ ಪೋಲೋ ಕಾರಿಗೂ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.