ಬಿಜೆಪಿ ಎಂದರೆ ಭಾರತೀಯ ಜೂಟಾ ಪಾರ್ಟಿ : ಈಶ್ವರ್ ಖಂಡ್ರೆ BJP saaksha tv
ಬೀದರ್ : ಬಿಜೆಪಿ ಎಂದರೆ ಭಾರತೀಯ ಜೂಟಾ ಪಾರ್ಟಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಕಿಡಿಕಾರಿದ್ದಾರೆ.
ಬಿಜೆಪಿಯ ಜನಸ್ವರಾಜ್ ಯಾತ್ರೆ ಬಗ್ಗೆ ಬೀದರ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಟೀಕೆ ಮಾಡಿದ ಅವರು, ಪರಿಷತ್ ಚುನಾವಣೆ ಘೋಷಣೆ ಆದಾಗಿನಿಂದಲೂ ಬಿಜೆಪಿ ಸುಳ್ಳು ಹೇಳಿಕೊಂಡು ಬರುತ್ತಿದೆ.
ಬಿಜೆಪಿ ಅಂದರೇ ಭಾರತೀಯ ಜೂಟಾ ಪಾರ್ಟಿ ಎಂಬಂತಾಗಿದೆ ಎಂದು ಕಿಡಿಕಾರಿದರು.
ಇನ್ನು ಮಹಾತ್ಮ ಗಾಂಧಿಜೀ ಅವರ ಸ್ವರಾಜ್ ಕಲ್ಪನೆಯನ್ನ ಪೂರ್ತಿಗೊಳಿಸದ ಬಿಜೆಪಿ ನಾಯಕರು ಗಾಂಧಿಯವರನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ.
ಅಲ್ಲದೇ ಗಾಂಧಿಜೀ ಅವರನ್ನ ಕೊಲೆ ಮಾಡಿದ ಗೋಡ್ಸೆಯ ದೇಗುಲ ಕಟ್ಟಲು ಹೊರಟಿದ್ದೀರಿ ಎಂದು ಖಂಡ್ರೆ ವಾಗ್ದಾಳಿ ನಡೆಸಿದ್ದಾರೆ.
ಇದೇ ವೇಳೆ ಕೃಷಿ ಕಾಯ್ದೆಗಳನ್ನು ವಾಪಸ್ ತೆಗೆದುಕೊಂಡ ವಿಚಾರವಾಗಿ ಮಾತನಾಡಿದ ಅವರು, ಐದು ರಾಜ್ಯಗಳಲ್ಲಿ ಚುನಾವಣೆ ಇರುವುದರಿಂದ ಸೋಲಿನ ಭಯದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದಿದ್ದಾರೆ. ಇದು ಪ್ರಜಾಪ್ರಭುತ್ವ ಹಾಗೂ ರೈತರಿಗೆ ಸಿಕ್ಕ ಜಯ ಎಂದು ಬಣ್ಣಿಸಿದರು.