ಲಖನೌ ; ಮುಸ್ಲಿಂ ಮಾರಾಟಗಾರರಿಂದ ತರಕಾರಿ ಕೊಳ್ಳಬೇಡಿ ಎಂದು ಉತ್ತರ ಪ್ರದೇಶ ಬಿಜೆಪಿ ಶಾಸಕ ಸುರೇಶ್ ತಿವಾರಿ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದಾರೆ. ತಿವಾರಿ ಅವರು ಬರ್ಹಾಜ್ ಜಿಲ್ಲೆಯ ಕಾರ್ಯಕ್ರಮವೊಂದರಲ್ಲಿ ಈ ಹೇಳಿಕೆ ನೀಡಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಕಾರ್ಯಕ್ರಮದಲ್ಲಿ ಮುಸ್ಲಿಂ ಮಾರಾಟಗಾರರು ತರಕಾರಿಗಳ ಮೇಲೆ ಎಂಜಲು ತುಪ್ಪುತ್ತಿದ್ದಾರೆ ಎನ್ನುವ ಕುರಿತು ಸುದ್ದಿ ಹರಿದಾಡಿರುವ ಕುರಿತಾಗಿ ಪ್ರಸ್ತಾಪಿಸಿದರು. ಪರಿಸ್ಥಿತಿ ಒಂದು ಹಂತಕ್ಕೆ ಬರುವವರೆಗೂ ಮುಸ್ಲಿಮರ ಬಳಿ ತರಕಾರಿ ಖರೀದಿಸಬೇಡಿ. ನಿಮಗೆಲ್ಲಾ ತಿಳಿದೇ ಇದೆ ಇಡೀ ದೇಶದಲ್ಲಿ ಕೊರೊನಾ ಹರಡಿಸಿದ್ದು ಜಮಾತ್ ಗೆ ಹೋಗಿ ಬಂದಿರುವ ಮುಸ್ಲಿಮರು ಎಂದು ಹೇಳಿಕೆ ನೀಡಿದ್ದಾರೆ.
ಆದರೆ ಕಳೆದ ವಾರವಷ್ಟೇ ಕೇಂದ್ರ ಸರ್ಕಾರವು ಮಾಹಿತಿ ನೀಡಿದ್ದು, ತರಕಾರಿ ಮೇಲೆ ಉಗುಳುತ್ತಿದ್ದಾರೆ ಎನ್ನುವುದು ಸುಳ್ಳು ಸುದ್ದಿ, ಯಾವುದೇ ಆತಂಕವಿಲ್ಲದೆ ತರಕಾರಿ ಕೊಳ್ಳಿ ಎಂದು ಹೇಳಿತ್ತು.