BJP : ‘ಕೈ’ ಬಿಟ್ಟು ‘ಕಮಲ’ ಹಿಡಿದ 300 ಕ್ಕೂ ಅಧಿಕ ಕಾರ್ಯಕರ್ತರು..!! ಕಾಂಗ್ರೆಸ್ ಗೆ ಶಾಕ್..!!
ಚಿಕ್ಕಮಗಳೂರು : ರಾಜ್ಯದಲ್ಲಿ 2023 ರ ವಿಧಾನಸಭಾ ಚುನಾವಣೆ ಸಮೀಪದಲ್ಲಿರುವ ಬೆನ್ನಲ್ಲೇ , ದೀಗ ಚಿಕ್ಕಮಗಳೂರಿನ ಶೃಂಗೇರಿ ಕ್ಷೇತ್ರ ಬಿಜೆಪಿಗೆ ಮತ್ತಷ್ಟು ಬಲ ಬಂದಿದೆ.. ಈ ಕ್ಷೇತ್ರ ವ್ಯಾಪ್ತಿಯಲ್ಲಿ 300 ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ‘ಕೈ’ ಬಿಟ್ಟು ಧಿಡೀರ್ ಬಿಜೆಪಿಗೆ ಸೇರ್ಪಡೆಗೊಂಡು ಅಚ್ಚರಿ ಮೂಡಿಸಿದ್ದಾರೆ..
ಈ ಮೂಲಕ ಶೃಂಗೇರಿ ಶಾಸಕ ಟಿ.ಡಿ ರಾಜೇಗೌಡಗೆ ಬಿಗ್ ಶಾಕ್ ಸಿಕ್ಕಿದೆ.. ಮೂಲಗಳ ಪ್ರಕಾರ ಶಾಸಕ ಟಿಡಿ ರಾಜೇಗೌಡ ವರ್ತನೆಯಿಂದ ಕಾರ್ಯಕರ್ತರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದಾರೆ ಎನ್ನಲಾಗ್ತಿದೆ.
ಮಹಲ್ಗೋಡು ಗ್ರಾಮದ ಕಾರ್ಯಕರ್ತರು, ಅವರೇ ಶಾಮಿಯಾನ ಹಾಕಿ, ಕಾರ್ಯಕ್ರಮ ಮಾಡಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ರಾಜೇಗೌಡರ ಮೇಲೆ ವಿಶ್ವಾಸವಿಲ್ಲ ಎಂದು ಹೇಳಿ, ಮೀಸಲಾತಿ (Reservation) ಹೆಚ್ಚಿಸಿದ ಬಿಜೆಪಿಗೆ ಜಿಂದಾಬಾದ್ ಕೂಗಿ ಜೈಕಾರ ಹಾಕಿದ್ದಾರೆ. ನೂತನ ಕಾರ್ಯಕರ್ತರನ್ನು ಬಿಜೆಪಿ ಮಾಜಿ ಸಚಿವ ಜೀವರಾಜ್ ಪಕ್ಷಕ್ಕೆ ಸ್ವಾಗತಿಸಿದ್ದಾರೆ..
BJP, more than 300 congress activitists joins bjp