ಇಷ್ಟು ದಿನ ರಾಜಕೀಯದಲ್ಲಿ ಇದ್ದಿದ್ದೇ ಪುಣ್ಯ : ಅನಂತಕುಮಾರ್ ಹೆಗಡೆ

1 min read

ಇಷ್ಟು ದಿನ ರಾಜಕೀಯದಲ್ಲಿ ಇದ್ದಿದ್ದೇ ಪುಣ್ಯ : ಅನಂತಕುಮಾರ್ ಹೆಗಡೆ

ಕಾರವಾರ : ಮುಂದಿನ ರಾಜಕೀಯದ ಬಗ್ಗೆ ಆಸೆ ಇಟ್ಟುಕೊಂಡಿಲ್ಲ. ಇಷ್ಟು ದಿನ ರಾಜಕೀಯದಲ್ಲಿ ಇದ್ದಿದ್ದೇ ಪುಣ್ಯ ಎಂದು ಸಂಸದ ಅನಂತ ಕುಮಾರ್ ಹೆಗಡೆ ಹೇಳಿದ್ದಾರೆ.

ಕಾರವಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅನಂತಕುಮಾರ್ ಹೆಗಡೆ, ನಾನೇನು ರಾಜಕೀಯದ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ.

ಇಷ್ಟು ದಿನ ರಾಜಕೀಯದಲ್ಲಿ ಇದ್ದಿದ್ದೇ ಪುಣ್ಯ .  ಜಿಲ್ಲೆಯ ಜನತೆ ಪ್ರೀತಿ ತೋರಿಸಿದ್ದಕ್ಕೆ ಸಂತೋಷವಿದೆ ಎಂದು  ರಾಜಕೀಯ ನಿವೃತ್ತಿ ಬಗ್ಗೆ ಮಾತನಾಡಿದ್ದಾರೆ.

BJP MP Ananthkumar speech saaksha tv

ಉತ್ತರಕನ್ನಡದಿಂದ ಐದು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಅನಂತ ಕುಮಾರ್ ಹೆಗಡೆ, ಈ ಹಿಂದೆಯೂ ರಾಜಕೀಯ ನಿವೃತ್ತಿ ಪಡೆಯುವ ಮಾತನಾಡಿದ್ದರು. ಕಳೆದ ಬಾರಿಯ ಚುನಾವಣೆಯೇ ಕೊನೆ ಎಂದು ಆಪ್ತರಲ್ಲಿ ಹೇಳಿಕೊಂಡಿದ್ದರು.

ಇದಲ್ಲದೇ ಕೆಲ ದಿನಗಳ ಹಿಂದೆ ಅನಾರೋಗ್ಯಕ್ಕೊಳಗಾಗಿದ್ದ ಅನಂತಕುಮಾರ್, ರಾಜಕೀಯ ಜೀವನದಿಂದ ದೂರ ಉಳಿದು ವಿಶ್ರಾಂತಿಗೆ ಒಳಗಾಗಿದ್ದರು.

ಇದೀಗ ಚೇತರಿಸಿಕೊಂಡ ಬಳಿಕ ಮತ್ತೆ ಕಾರ್ಯಕ್ರಮಗಳಿಗೆ ಆಗಮಿಸಿದ್ದು, ರಾಜಕೀಯ ಸಾಕು ಎನ್ನುವ ಮಾತುಗಳನ್ನಾಡಿದ್ದಾರೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd