ಬೆಂಗಳೂರು : ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆ ಹತ್ತಿರವಾಗುತ್ತಿದಂತೆ ಬಿಜೆಪಿ ವಲಯದಲ್ಲಿ ರಾಜಕೀಯ ಚಟುವಟಿಕೆಗಳು ಗದಿಗೆದರಿವೆ. ಇನ್ನೊಂದೆಡೆ ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಬಿಜೆಪಿಯ ಹಿರಿಯ ಶಾಸಕ ಉಮೇಶ್ ಕತ್ತಿ ತಮ್ಮ ತಮ್ಮನಿಗಾಗಿ ಪಕ್ಷದೊಳಗೆ ಕತ್ತಿ ವರಸೆ ಶುರು ಮಾಡಿದ್ದಾರೆ. ಹಾಗಾಗಿ ಮೊದಲ ಭಾರಿ ಸಿಎಂ ಬಿ.ಎಸ್ ಯಡಿಯೂರಪ್ಪನವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಆ ವೇಳೆ ಯಡಿಯೂರಪ್ಪನವರಿಂದ ಉಮೇಶ್ ಕತ್ತಿಯವರಿಗೆ ಭರವಸೆ ಸಿಕ್ಕಿರಲಿಲ್ಲ.
ಆದ್ದರಿಂದಲೇ ರೆಬಲ್ ಶಾಸಕರನ್ನು ಒಂದೆಡೆ ಸೇರಿಸಿ ಡಿನ್ನರ್ ಪಾರ್ಟಿ ಮಾಡಿದ್ದರು. ಇದಾದ ಬಳಿಕ ಮತ್ತೊಮ್ಮೆ ರಮೇಶ್ ಕತ್ತಿ ಅವರೊಂದಿಗೆ ಬಿ.ಎಸ್.ಯಡಿಯೂರಪ್ಪನವರು ಭೇಟಿ ಮಾಡಿದ್ದಾರೆ. ಎರಡನೇ ಬಾರಿಯು ಸಿಎಂ ಯಡಿಯೂರಪ್ಪನವರಿಂದ ಭರವಸೆ ಸಿಕ್ಕಿಲ್ಲ ಎಂದು ಹೇಳಾಗುತ್ತಿದೆ. ಇದಲ್ಲದೆ ಇನ್ನೂ ಕೆಲ ಜನ ಟಿಕೆಟ್ ಗಾಗಿ ತೆರೆಮರೆಯಲ್ಲಿ ಲಾಬಿ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಇದೆ ವೇಳೆ ನಿವೃತ್ತ ಡಿಜಿಪಿ ಶಂಕರಬಿದರಿ, ಮಾಜಿ ಶಾಸಕ ನಿರ್ಮಲ್ ಕುಮಾರ್ ಸುರಾನ್, ತೇಜಸ್ವಿನಿ ಅನಂತ ಕುಮಾರ್, ಉದ್ಯಮಿ ಪ್ರಕಾಶ್ ಶೆಟ್ಟಿ ಸೇರಿದಂತೆ ಇನ್ನೂ ಕೆಲವರ ಹೆಸರಗಳು ಕೇಳಿ ಬರುತ್ತಿದೆ. ಒಂದೆಡೆ ತೇಜಸ್ವಿನಿ ಅನಂತಕುಮಾರ್ ಅವರಿಗೆ ಈ ಬಾರಿ ರಾಜ್ಯಸಭೆ ಟಿಕೆಟ್ ಸಿಗುತ್ತದೆ ಎಂದು ಚರ್ಚೆ ನಡೆದರೆ ಮತ್ತೊಂದೆಡೆ ರಮೇಶ್ ಕತ್ತಿ ಟಿಕೆಟ್ ಸಿಗುವ ಸಾಧ್ಯತೆಯಿದೆ ಎಂದು ಚರ್ಚೆ ನಡೆಯುತ್ತಿದೆ.
ಇದರ ನಡುವೆ ನನಗೆ ಇನ್ನೊಂದು ಬಾರಿ ಅವಕಾಶ ಮಾಡಿಕೊಡಿ ಎಂದು ಹಾಲಿ ಸಂಸದ ಪ್ರಭಾಕರ್ ಕೋರೆ ಕೇಳುತ್ತಿದ್ದಾರೆ ಎನ್ನಲಾಗಿದೆ. ಆದರೆ ಟಿಕೆಟ್ ಯಾರ ಪಾಲಾಗುತ್ತದೆ ಎಂದು ನಾಳೆ ನಡೆಯುವ ಪಕ್ಷದ ಸಭೆಯಲ್ಲಿ ತೀರ್ಮಾನವಾಗಲಿದೆ. ಸಭೆಯಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಪಕ್ಷದ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಸೇರಿದಂತೆ ಬಿಜೆಪಿಯ ಹಿರಿಯ ಮುಖಂಡರು ಭಾಗಿಯಾಗುತ್ತಾರೆ.








