ಕೆರೆಗೆ ನೀರು ಹರಿಸದಿದ್ದರೇ ಬಿಜೆಪಿಗೆ ತಕ್ಕ ಉತ್ತರ : ಸುರೇಶ್ ಗೌಡ ಗರಂ
ತುಮಕೂರು : ಮದಲೂರು ಕೆರೆಗೆ ನೀರು ಹರಿಸದಿದ್ದರೇ ಜನರು ಬಿಜೆಪಿಗೆ ತಕ್ಕ ಉತ್ತರ ನೀಡುತ್ತಾರೆ ಎಂದು ತುಮಕೂರು ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ಗೌಡ ಅವರು ಸ್ವಪಕ್ಷದ ವಿರುದ್ಧ ಗರಂ ಆಗಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮದಲೂರು ಕೆರೆಗೆ ಯಾಕೆ ನೀರು ಬಿಡುತ್ತಿಲ್ಲ ಎಂದು ಮಾಜಿ ಸಿಎಂ ಬಿಎಸ್ ವೈ, ಸಚಿವ ಮಾಧುಸ್ವಾಮಿಯವರೆ ಉತ್ತರ ಕೊಡ್ಬೇಕು.
ಎಲ್ಲರಿಗೂ ನೀರು ಕೊಡಬೇಕು, ಎಲ್ಲರನ್ನೂ ಸಮಾನವಾಗಿ ನೋಡ್ಕೋಬೇಕು ಎಂಬುದು ನನ್ನ ಉದ್ದೇಶ. ನಮ್ಮ ಸರ್ಕಾರ ಇರೋವರೆಗೂ ಮದಲೂರು ಕೆರೆಯನ್ನ ತುಂಬಿಸಬೇಕು ಎಂಬುದು ನಮ್ಮ ಇಚ್ಚೆಯಾಗಿದೆ.
ಒಂದು ವೇಳೆ ಕೆರೆಗೆ ನೀರು ಹರಿಸದಿದ್ದರೇ ಜನರು ತಕ್ಕ ಉತ್ತರ ನೀಡುತ್ತಾರೆ ಎಂದು ಹೇಳಿದರು.
ಇನ್ನು ಮದಲೂರು ಕೆರೆಗೆ ನೀರು ಹರಿಸುತ್ತೇವೆ ಎಂದು ಅಲ್ಲಿನ ಜನಕ್ಕೆ ಮಾತು ಕೊಟ್ಟಿದ್ವಿ. 70 ವರ್ಷಗಳ ನಂತರ ಮೊದಲನೇ ಬಾರಿಗೆ ಬಿಜೆಪಿಗೆ ಮತ ಹಾಕಿದ್ದಾರೆ.
ಭರವಸೆಗಳನ್ನ ಈಡೇರಿಸುವಂತೆ ಈಗಿನ ಸಿಎಂ, ರಾಜ್ಯಾದ್ಯಕ್ಷರ ಬಳಿ ಮಾತನಾಡ್ತೀನಿ. ಬಗೆಹರಿಸುವಂತ ಪ್ರಯತ್ನಗಳನ್ನ ನಾನು ಮಾಡ್ತೇನೆ.
ಈ ಸಮಸ್ಯೆ ಬಗೆಹರಿಸದೇ ಇದ್ರೆ ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಜನರೆ ಉತ್ತರ ಕೊಡ್ತಾರೆ. ನೀರು ಬಿಡೋಕೆ ಕಾನೂನಿನಲ್ಲಿ ಅವಕಾಶ ಇಲ್ದೇ ಇದ್ರೆ ಮಾಧುಸ್ವಾಮಿಯವರು ಕಾನೂನಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.









