BJP tweet ಸಿದ್ದರಾಮಯ್ಯ ಸುಳ್ಳು ಭರವಸೆಗಳಿಗೆ ಲೆಕ್ಕವೇ ಇಲ್ಲ
ಬೆಂಗಳೂರು : ನಿಮ್ಮ ಕಾಂಗ್ರೆಸ್ ಅವಧಿಯಲ್ಲಿ ನೀವು ನೀಡಿದ್ದ ಸುಳ್ಳು ಭರವಸೆಗಳಿಗೆ ಲೆಕ್ಕವೇ ಇಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ರಾಜ್ಯ ಬಿಜೆಪಿ ಕಿಡಿಕಾರಿದೆ.
ಉತ್ತರ ಕೊಡಿ ಎಂದು ರಾಜ್ಯ ಬಿಜೆಪಿ ಸರಣಿ ಟ್ವೀಟ್ ಗಳನ್ನು ಮಾಡಿದ್ದು, ಮಾನ್ಯ ಸಿದ್ದರಾಮಯ್ಯ ನವರೇ ನಿಮ್ಮ ಸರ್ಕಾರದ ಅವಧಿಯಲ್ಲಿ ಪ್ರತಿಯೊಬ್ಬರಿಗೂ ಮನೆ ನಿರ್ಮಿಸಿಕೊಡುವುದಾಗಿ ಸುಳ್ಳು ಭರವಸೆ ನೀಡಿದ್ದಿರಿ.
ಈ ಯೋಜನೆಯನ್ನು ಪೂರ್ಣಗೊಳಿಸಲು ನಿಮ್ಮ ಸರ್ಕಾರ ಕಿಂಚಿತ್ ಆದರೂ ಪ್ರಯತ್ನಿಸಿತೇ? ಉತ್ತರ ಕೊಡಿ

ನಿಮ್ಮ ಕಾಂಗ್ರೆಸ್ ಅವಧಿಯಲ್ಲಿ ನೀವು ನೀಡಿದ್ದ ಸುಳ್ಳು ಭರವಸೆಗಳಿಗೆ ಲೆಕ್ಕವೇ ಇಲ್ಲ.
ಪ್ರತಿ ಜಿಲ್ಲೆಗೂ ಶುದ್ಧ ಕುಡಿಯುವ ನೀರು ಸರಬರಾಜು ಮಾಡುತ್ತೇವೆ ಎಂದು ಹೇಳಿದ್ದ ನಿಮ್ಮ ಸುಳ್ಳು ಭರವಸೆಗಳು ಕನಿಷ್ಠ 9 ಜಿಲ್ಲೆಗಳಲ್ಲೂ ಪೂರ್ಣಗೊಂಡಿಲ್ಲ ಸಿದ್ದರಾಮಯ್ಯ ನವರೇ ನಿಮ್ಮ ಆಡಳಿತದ ರೀತಿ ಇದೇಯೇ?
ಜಿಲ್ಲೆ ಜಿಲ್ಲೆಗೂ ಸೂಪರ್ ಸ್ಷೆಷಾಲಿಟಿ ಆಸ್ಪತ್ರೆ ಕಟ್ಟುತ್ತೇವೆ ಎಂದು ನಿಮ್ಮ ಕಾಂಗ್ರೆಸ್ ಅವಧಿದಲ್ಲಿ ಮಹಾ ಸುಳ್ಳು ಭರವಸೆ ನೀಡಿತ್ತು.
ಪ್ರತಿ ಜಿಲ್ಲೆ ಇರಲಿ ಕನಿಷ್ಠ 5 ಜಿಲ್ಲೆಗಳಲ್ಲಿ ಈ ನಿಮ್ಮ ಭರವಸೆ ಪೂರ್ಣಗೊಂಡಿಲ್ಲ. ಉತ್ತರಕೊಡಿ ಎಂದು ಬರೆದುಕೊಂಡಿದೆ.








