BJP Tweet | ಸಿದ್ದರಾಮಯ್ಯ ‘ಕೊನೆಯ’ ಚುನಾವಣೆಯಲ್ಲಿ ಸೋಲುವುದು ಶತಸಿದ್ಧ
ಬೆಂಗಳೂರು : ವಿಪಕ್ಷ ನಾಯಕ ಸಿದ್ದರಾಮಯ್ಯ ‘ಕೊನೆಯ’ ಚುನಾವಣೆಯಲ್ಲಿ ಸೋಲುವುದು ಶತಸಿದ್ಧ ಎಂದು ರಾಜ್ಯ ಬಿಜೆಪಿ ಭವಿಷ್ಯ ನುಡಿದಿದೆ.
81 ವರ್ಷದ ನಂತರ ಕೋಲು ಹಿಡಿದು ರಾಜಕಾರಣ ಮಾಡುವುದಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಟ್ವಿಟ್ಟರ್ ನಲ್ಲಿ ಬಿಜೆಪಿ ತಿರುಗೇಟು ನೀಡಿದೆ.

ಬಿಜೆಪಿ ತನ್ನ ಟ್ವಿಟ್ಟರ್ ಖಾತೆಯಲ್ಲಿ.. ಕೋಲು ನೀವು ಹಿಡಿಯಬೇಕಾಗಿಲ್ಲ, ಜನರೇ ಹಿಡಿಸುತ್ತಾರೆ. ಅದಕ್ಕಾಗಿ 2023 ರ ವರೆಗೆ ಕಾಯಬೇಡಿ. ಈಗಲೇ ಕೋಲು ಹುಡುಕಿಕೊಳ್ಳಿ. ನಿಮ್ಮದೇ ಪಕ್ಷದ ನಾಯಕರು ಹಾಗೂ ಮತದಾರರು ನಿಮ್ಮ ಕೈ ಹಿಡಿಯುವುದಿಲ್ಲ. ಅಂತಿಮವಾಗಿ ನಿಮ್ಮ ಬಳಿ ಉಳಿಯುವುದು ಕೋಲಷ್ಟೇ!
https://twitter.com/BJP4Karnataka/status/1545644510562361344?s=20&t=_ZLTvuDvvJ4SFqyt31XThg
ಸಿದ್ದರಾಮಯ್ಯನವರ ಬಗಲಲ್ಲೇ ಶತ್ರುಗಳಿದ್ದಾರೆ. √ ಪರಮೇಶ್ವರ √ ಡಿಕೆಶಿ √ ಮುನಿಯಪ್ಪ √ ಖರ್ಗೆ √ ದೇಶಪಾಂಡೆ √ ಶ್ಯಾಮನೂರು ಶಿವಶಂಕರಪ್ಪ
ಪಟ್ಟಿ ದೊಡ್ಡದಿದೆ. ನಿಮ್ಮ ಸೋಲಿಗೆ ಸುಪಾರಿ ಕೊಡುವವರನ್ನು ಅನ್ಯ ಪಕ್ಷದಲ್ಲಿ ಹುಡುಕುವ ಅಗತ್ಯವಿಲ್ಲ.
ಚಾಮುಂಡೇಶ್ವರಿಯಲ್ಲಿ ಸೋಲಾಯ್ತು, ಬಾದಾಮಿಯಲ್ಲಿ ಸೋಲುವ ಭೀತಿ. ಸಿದ್ದರಾಮಯ್ಯನವರೇ, ಮುಂದೆ ನೀವು ಚುನಾವಣೆಗೆ ನಿಲ್ಲಬಹುದು ಆದರೆ ಗೆಲ್ಲಲು ಸಾಧ್ಯವಿಲ್ಲ. ನಿಮ್ಮ ಜೀವನದಲ್ಲಿ ಚುನಾವಣಾ ಪರ್ವ ಮುಗಿದ ಅದ್ಯಾಯ. ನಿಮ್ಮ ‘ಕೊನೆಯ’ ಚುನಾವಣೆಯಲ್ಲಿ ಸೋಲುವುದು ಶತಸಿದ್ಧ. ಇದು ನಮ್ಮ ಮಾತಲ್ಲ,ನಿಮ್ಮದೇ ಪಕ್ಷದ ನಾಯಕರ ಅಭಿಲಾಷೆ ಎಂದು ಬಿಜೆಪಿ ಕಿಡಿಕಾರಿದೆ.








