ಪ್ರಧಾನಿ ಮೋದಿ ಭದ್ರತೆಯಲ್ಲಿ ಲೋಪ – ಕಾಪ್ಟರ್ ಗೆ ಕಪ್ಪು ಬಲೂನ್ ಹಾರಿ ಬಿಟ್ಟ ಕೈ ಕಾರ್ಯಕರ್ತರು…
ಪ್ರಧಾನಿ ನರೇಂದ್ರ ಮೋದಿ ಅವರ ಆಂಧ್ರಪ್ರದೇಶ ಭೇಟಿ ವೇಳೆ ಭದ್ರತಾ ಲೋಪ ಪ್ರಕರಣವೊಂದು ಬೆಳಕಿಗೆ ಬಂದಿದೆ. ವಿಜಯವಾಡದ ಗನ್ನವರಂ ವಿಮಾನ ನಿಲ್ದಾಣದಿಂದ ಪ್ರಧಾನಿಯವ ಹೆಲಿಕಾಪ್ಟರ್ ಟೇಕಾಫ್ ಆಗಿವೆ. ಇದೇ ವೇಳೆ ವಿಮಾನ ನಿಲ್ದಾಣದ ಬಳಿ ನಿರ್ಮಾಣ ಹಂತದಲ್ಲಿರುವ ಕಟ್ಟಡದ ಮೇಲ್ಛಾವಣಿಯಿಂದ ಕಾಂಗ್ರೆಸ್ ಕಾರ್ಯಕರ್ತರು ಕಪ್ಪು ಬಲೂನ್‌ಗಳನ್ನು ಬಿಟ್ಟು ಪ್ರಧಾನಿ ಬೇಟಿಯನ್ನ ವಿರೋಧಿಸಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತರು ಬಲೂನ್‌ಗಳಿಗೆ ಪೋಸ್ಟರ್ ಕಟ್ಟಿ ಹಾರಿಬಿಟ್ಟಿದ್ದಾರೆ. ಭದ್ರತೆ ಲೋಪ ಪ್ರಕರಣದಲ್ಲಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರ ಅಲ್ಲೂರಿ ಸೀತಾರಾಮ ರಾಜು ಅವರ 125ನೇ ಜನ್ಮದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಆಂಧ್ರಪ್ರದೇಶಕ್ಕೆ ಆಗಮಿಸಿದ್ದಾರೆ. ಇದೇ ಸಂದರ್ಭದಲ್ಲಿ ರಾಜು ಅವರ 30 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಅವರು ಅನಾವರಣಗೊಳಿಸಿದರು.
ಅಲ್ಲೂರಿ ಸೀತಾರಾಮರಾಜು ಅವರ 125ನೇ ಜಯಂತಿ ಹಾಗೂ ರಂಪ ಕ್ರಾಂತಿಯ 100ನೇ ವರ್ಷಾಚರಣೆಯನ್ನು ವರ್ಷವಿಡೀ ಆಚರಿಸಲಾಗುವುದು ಎಂದರು. ಪಾಂಡ್ರಂಗಿಯಲ್ಲಿ ಅವರ ಜನ್ಮಸ್ಥಳದ ಜೀರ್ಣೋದ್ಧಾರ, ಚಿಂತಪಲ್ಲಿ ಪೊಲೀಸ್ ಠಾಣೆಯ ಜೀರ್ಣೋದ್ಧಾರ, ಮೊಗಲ್ಲು ಅಲ್ಲೂರಿ ಧ್ಯಾನಮಂದಿರ ನಿರ್ಮಾಣ, ಈ ಕಾರ್ಯಗಳು ನಮ್ಮ ಅಮೃತ ಚೇತನದ ಪ್ರತೀಕಗಳಾಗಿವೆ.
ಸ್ವಾತಂತ್ರ್ಯ ಹೋರಾಟವು ಕೆಲವು ಪ್ರದೇಶಗಳ ಅಥವಾ ಕೆಲವು ಜನರ ಇತಿಹಾಸವಲ್ಲ ಎಂದು ಪ್ರಧಾನಿ ಹೇಳಿದರು. ಈ ಇತಿಹಾಸವು ಭಾರತದ ಪ್ರತಿಯೊಂದು ಮೂಲೆ ಮೂಲೆಯ ತ್ಯಾಗ, ದೃಢತೆ ಮತ್ತು ತ್ಯಾಗದ ಇತಿಹಾಸವಾಗಿದೆ. ಸೀತಾರಾಮರಾಜು ಅವರು ಬುಡಕಟ್ಟು ಸಮಾಜದ ಹಕ್ಕುಗಳಿಗಾಗಿ ಮತ್ತು ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟರು. ರಾಜು ಅವರ ಜೀವನ ಪಯಣ ನಮಗೆಲ್ಲರಿಗೂ ಸ್ಫೂರ್ತಿಯಾಗಿದೆ.