ಬ್ಲಾಕ್ ಫಂಗಸ್ ಬಳಿಕ ದೀರ್ಘ ಕಾಲದ ಕೊರೊನಾ ರೋಗಿಗಳಲ್ಲಿ ಮತ್ತೊಂದು ಮಾರಕ ಕಾಯಿಲೆ ಪತ್ತೆ..!
ಕೊರೊನಾದಿಂದ ಚೇರತಿರಿಸಿಕೊಂಡ್ರು ಕೂಡ ಬ್ಲಾಕ್ ಸೋಂಕು ತಗುಲಿದ್ದವರಲ್ಲಿ ಬ್ಲಾಕ್ ಫಂಗಸ್ ಕಾಣಿಸಿಕೊಳ್ತಿರುವುದು ಆತಂಕಕ್ಕೆ ಕಾರಣವಾಗಿದೆ.. ಈ ನಡುವೆ ಡೆಲ್ಟಾ ಪ್ಲಸ್ ಆತಂಕ ಜೊತೆಗೆ ಹಳದಿ ಫಂಗಸ್ , ಹಸಿರು ಪಂಗಸ್ ಕಾಣಿಸಿಕೊಂಡು ಜನರನ್ನ ಆತಂಕಕ್ಕೆ ದೂಡಿದೆ.. ಈ ನಡುವೆ ಮತ್ತೊಂದು ಆಘಾತಕಾರಿ ಪ್ರಕರಣಗಳು ವರದಿಯಾಗಿದೆ. ಹೌದು ಮುಂಬೈನಲ್ಲಿ ಕೊರೊನಾ ಸೋಂಕಿನಿಂದ ಗುಣಮುಖರಾದವರಲ್ಲಿ ವ್ಯಕ್ತಿಗಳಲ್ಲಿ ಅವಸ್ಕುಲಾರ್ ನೆಕ್ರೋಸಿಸ್ ಅಥವಾ ಮೂಳೆ ಅಂಗಾಶಗಳು ಸಾಯುವ ವಿಚಿತ್ರ ಕಾಯಿಲೆ ವರದಿಯಾಗಿದೆ.
ಮಹೀಮ್ನ ಹಿಂದೂಜಾ ಆಸ್ಪತ್ರೆಯಲ್ಲಿ 40 ವರ್ಷದೊಳಗಿನ ಮೂವರು ಈ ಕಾಯಿಲೆಯಿಂದಾಗಿ ದಾಖಲಾಗಿದ್ದಾರೆ. ಈ ಮೂವರು 2 ತಿಂಗಳ ಹಿಂದೆಯಷ್ಟೇ ಕೊರೊನಾದಿಂದ ಗುಣಮುಖರಾಗಿದ್ದರು. ತೊಡೆಯ ಮೂಳೆಯಲ್ಲಿ ನೋವು ಕಂಡು ಬಂದ ಹಿನ್ನೆಲೆಯಲ್ಲಿ ತಪಾಸಣೆಗೆ ಒಳಗಪಡಿಸಿದ ವೇಳೆ ಈ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ ಎಂದು ಹಿಂದೂಜಾ ಆಸ್ಪತ್ರೆ ನಿರ್ದೇಶಕ ಡಾ. ಸಂಜಯ್ ಅಗರ್ವಾಲಾ ಹೇಳಿದ್ದಾರೆ.
ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ – ವೆಲ್ಡರ್, ಫಿಟ್ಟರ್ ಮತ್ತು ಮೆಷಿನಿಸ್ಟ್ ಹುದ್ದೆಗೆ ಅರ್ಜಿ ಆಹ್ವಾನ
ಈ ನಡುವೆ ಕೊಯಮತ್ತೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ವಿಚಿತ್ರ ಶಿಲೀಂಧ್ರ ಕಾಯಿಲೆ ಮ್ಯೂಕಾರ್ಮೈಕೋಸಿಸ್ನಿಂದ ಬಳಲುತ್ತಿರುವ 264 ರೋಗಿಗಳಲ್ಲಿ 30 ಮಂದಿ ತಮ್ಮ ದೃಷ್ಟಿಯನ್ನ ಕಳೆದುಕೊಂಡಿದ್ದಾರೆ ಎಂದು ಆಸ್ಪತ್ರೆ ಉನ್ನತ ಅಧಿಕಾರಿ ಮಾಹಿತಿ ನೀಡಿದ್ದಾರೆ. ಆರಂಭಿಕ ಹಂತದಲ್ಲೇ ಈ ಸಮಸ್ಯೆಗೆ ಚಿಕಿತ್ಸೆ ಪಡೆದವರು ಗುಣಮುಖರಾಗಿದ್ದಾರೆ. ಎಂದು ಸರ್ಕಾರಿ ಆಸ್ಪತ್ರೆ ಡೀನ್ ಡಾ. ಎನ್ ನಿರ್ಮಲಾ ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ.
ಹವಾಮಾನ ವೈಪರೀತ್ಯಗಳಿಂದ ಬರುವ ವೈರಲ್ ಜ್ವರ ತಡೆಗಟ್ಟುವ ಮನೆಮದ್ದುಗಳು
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.