ಅಧಿಕ ಸ್ಟಿರಾಯ್ಡ್ ತಗೊಂಡವರಿಗೆ ಬ್ಲಾಕ್ ಫಂಗಸ್ : ಸುಧಾಕರ್
ಬೆಂಗಳೂರು : ಬ್ಲಾಕ್ ಪಂಗಸ್ ರೋಗ ನಿರೋಧಕ ಶಕ್ತಿ ಕಡಿಮೆ ಇರೋರಿಗೆ, ಅಧಿಕ ಸ್ಟಿರಾಯ್ಡ್ ತಗೊಂಡವರಿಗೆ ಬ್ಲಾಕ್ ಫಂಗಸ್ ಪ್ರಾರಂಭ ಆಗುತ್ತದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿ ಬ್ಲಾಕ್ ಫಂಗಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ಲಾಕ್ ಪಂಗಸ್ ರೋಗ ನಿರೋಧಕ ಶಕ್ತಿ ಕಡಿಮೆ ಇರೋರಿಗೆ, ಅಧಿಕ ಸ್ಟಿರಾಯ್ಡ್ ತಗೊಂಡವರಿಗೆ ಬ್ಲಾಕ್ ಫಂಗಸ್ ಪ್ರಾರಂಭ ಆಗುತ್ತದೆ.
ಮೂಗಿನ ಮೂಲಕ ಆರಂಭ ಆಗಿ, ಕಣ್ಣಿಗೆ ತಗುಲಿ, ದೃಷ್ಟಿ ಕೂಡ ಕಳೆದುಕೊಳ್ಳುವ ಅಪಾಯ ಇದೆ. ಸರಿಯಾದ ಚಿಕಿತ್ಸೆ ತಗಳೊದೆ ಹೋದರೆ ಜೀವಕ್ಕೂ ಅಪಾಯ ಇದೆ ಎಂದು ಎಚ್ಚರಿಸಿದರು
ಇನ್ನು ನಾಳೆಯಿಂದ ಬೋರಿಂಗ್ ಲ್ಲಿ ಬ್ಲಾಕ್ ಫಂಗಸ್ ಗೆ ಚಿಕಿತ್ಸೆ ಆರಂಭವಾಗುತ್ತದೆ. ರಾಜ್ಯದ ಎಲ್ಲಾ ವೈದ್ಯಕೀಯ ಕಾಲೇಜು, ಜಿಲ್ಲಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡ್ತೇವೆ. ಪ್ರತಿ ರೋಗಿಗೆ ಎರಡರಿಂದ ಮೂರು ಲಕ್ಷ ವೆಚ್ಚ ಆಗಲಿದೆ.
ಉಚಿತ ಚಿಕಿತ್ಸೆ ನೀಡುವ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡ್ತೇವೆ. 20 ಸಾವಿರ ವಯಲ್ಸ್ ಗೆ ಕೇಂದ್ರಕ್ಕೆ ಮನವಿ ಮಾಡಿದ್ದೇವೆ. ಮದುಮೇಹ, ಮುತ್ರಪಿಂಡ ಅಂಗಾಂಗ ಕಸಿ ಮಾಡಿಕೊಂಡವರು ಸ್ವಲ್ಪ ಜಾಗ್ರತೆ ಇರಿ ಎಂದು ಮನವಿ ಮಾಡಿಕೊಂಡರು.
ಇನ್ನು ಸ್ಟಿರಾಯ್ಡ್ ನೀವೇ ತಗೊಬೇಡಿ, ವೈದ್ಯರು ಕೂಡ ಉತ್ತಮ ಚಿಕಿತ್ಸೆ ನೀಡಬೇಕು. ಕರೋನಾಗೆ ನಿರ್ದಿಷ್ಟ ಔಷಧಿ ನೀಡಿ. ಅಧಿಕ ಸ್ಟಿರಾಯ್ಡ್ ನೀಡಬೇಡಿ ವೈದ್ಯರಿಗೆ ಸುಧಾಕರ್ ಮನವಿ ಮಾಡಿದರು.
ಇದೇ ವೇಳೆ ರಾಜ್ಯದಲ್ಲಿ ಸೋಂಕು ಪ್ರಕರಣಗಳು ಕಡಿಮೆ ಆಗುತ್ತಿರುವ ಬಗ್ಗೆ ಮಾತನಾಡಿ, ಪಾಸಿಟಿವಿಟಿ ದರ ಇಳಿಯೋದು ಮುಖ್ಯ ಹೊರತು ನಂಬರ್ ಮುಖ್ಯ ಅಲ್ಲ. ಬೆಂಗಳೂರಲ್ಲಿ ಪಾಸಿಟಿವಿಟಿ ಕಡಿಮೆ ಆಗ್ತಿದೆ ಹೀಗಾಗಿ ನಂಬರ್ ಕಡಿಮೆ ಬರ್ತಿದೆ.
ಹೊರ ಜಿಲ್ಲೆಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಪಾಸಿಟಿವಿಟಿ ದರ ಹೆಚ್ಚಾಗ್ತಿದೆ. ಹೊರಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಕಡಿಮೆ ಆಗಿಲ್ಲ. ಎರಡೂ ಅಂಶಗಳನ್ನು ಕೂಡ ಸಿದ್ದರಾಮಯ್ಯ ಡಿಕೆಶಿವಕುಮಾರ್ ಗಮನಕ್ಕೆ ತರ್ತೇನೆ ಎಂದು ತಿಳಿಸಿದರು.










