Blakrishna Doshi : ಪದ್ಮಭೂಷಣ ಪುರಸ್ಕೃತ ಬಾಲಕೃಷ್ಣ ದೋಶಿ ಇನ್ನಿಲ್ಲ..!!
ರಾಯಲ್ ಗೋಲ್ಡ್ ಮೆಡಲ್ ಮತ್ತು ಪ್ರಿಟ್ಜ್ಕರ್ ಆರ್ಕಿಟೆಕ್ಚರ್ ಪ್ರಶಸ್ತಿ , ಈ ಎರೆಡೂ ಪ್ರಶಸ್ತಿಯನ್ನೂ ಪಡೆದಿದ್ದ ಏಕೈಕ ಭಾರತೀಯರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ , ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ವಿಶ್ವ ವಿಖ್ಯಾತ ವಾಸ್ತುಶಿಲ್ಪಿ ಶ್ರೀ ಬಾಲಕೃಷ್ಣ ವಿಠ್ಠಲ್‌ದಾಸ್ ದೋಶಿ ಅವರು ಇದೀಗ ಇಹಲೋಕ ತ್ಯಜಿಸಿದ್ದಾರೆ..
2020 ರಲ್ಲಿ ಭಾರತದ ಮೂರನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಭೂಷಣ ಪ್ರಶಸ್ತಿ ಪಡೆದಿದ್ದ ಬಾಲಕೃಷ್ಣ ವಿಠ್ಠಲ್ ದಾಸ್ ದೋಶಿ ಅವರು ತಮ್ಮ 95ನೇ ವಯಸ್ಸಿನಲ್ಲಿ ಗುಜರಾತ್ ನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ..
1954ರಲ್ಲಿ ಗಿರಣಿ ಮಾಲೀಕರ ಸಂಘದ ಕಟ್ಟಡ 1955ರಲ್ಲಿ ಅಹಮದಾಬಾದ್ ನಲ್ಲಿ ವಿಲ್ಲಾ ಸಾರಾಭಾಯಿ ಸೇರಿದಂತೆ ಕಾರ್ಬ್ಯೂಸಿಯರ್‌ನ ಯೋಜನೆಗಳ ನಿರ್ಮಾಣದ ಮೇಲ್ವಿಚಾರಕರಾಗಿ ಭಾರತದಲ್ಲಿ ಕೆಲಸ ಆರಂಭಿಸಿದ ದೋಶಿ ಅವರು, 1956ರಲ್ಲಿ ತಮ್ಮದೇ ಆದ ವಾಸ್ತುಶಿಲ್ಪ ಅಧ್ಯಯನ ಕೇಂದ್ರವನ್ನು ಸ್ಥಾಪಿಸಿದರು.
ಈ ಸಂಸ್ಥೆಯು 1962ರ ನಂತರ ಐಐಎಂ ಅಹಮದಾಬಾದ್ ಸೇರಿದಂತೆ ಭಾರತದ ವಿವಿಧೆಡೆ ನೂರಕ್ಕೂ ಹೆಚ್ಚು ಯೋಜನೆಗಳಲ್ಲಿ ಕೆಲಸ ಮಾಡಿದೆ. ಬಳಿಕ 1963ರಲ್ಲಿ ತಮ್ಮ ಸ್ವಂತ ನಿವಾಸವನ್ನು ತಮ್ಮದೇ ಯೋಚನೆಗಳ ಮೂಲಕ ವಿನ್ಯಾಸಗೊಳಿಸಿ ಕಮಲಾ ಹೌಸ್ ಎಂದು ನಾಮಕರಣ ಮಾಡಿದರು. ಜೊತೆಗೆ 1978ರಲ್ಲಿ ವಾಸ್ತು ಶಿಲ್ಪ ಫೌಂಡೇಶನ್ ಅನ್ನು ಸ್ಥಾಪಿಸಿ ಶೈಕ್ಷಣಿಕ ಮತ್ತು ವೃತ್ತಿಪರ ಸಲಹೆಗಾರರ ನಡುವೆ ಕೊಂಡಿಯಾಗಿ ಕಾರ್ಯ ನಿರ್ವಹಿಸುವಂತೆ ಯೋಜನೆ ರೂಪಿಸಿದರು.
Blakrishna Doshi, Padma Bhushan awardee Balakrishna Doshi is no more








