ಹೋರಿ ಅಭಿಮಾನಿಗಳು ಹಾವೇರಿಯಲ್ಲಿ ಭರ್ಜರಿಯಾಗಿ ಹೋರಿ ಹುಟ್ಟು ಹಬ್ಬ ಆಚರಿಸಿ, ರಕ್ತದಾನ ಮಾಡಿದ್ದಾರೆ.
ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರು ಗ್ರಾಮದಲ್ಲಿ ಸೂರ್ಯವಂಶಿ 102 ಎಂಬ ಹೋರಿಗೆ ಸಿಂಗಾರ ಮಾಡಿ ಅದ್ಧೂರಿಯಾಗಿ ಹುಟ್ಟ ಹಬ್ಬ ಆಚರಿಸಿದ್ದಾರೆ. ಕೇಕ್ ಸಹ ತಂದಿದ್ದರು. ಆ ಕೇಕನ್ನು ಹೋರಿಯನ್ನು ಜೊತೆಗೆ ನಿಲ್ಲಿಸಿಕೊಂಡು ಮಕ್ಕಳು ಹಾಗೂ ಮಹಿಳೆಯರು ಕಟ್ ಮಾಡಿದ್ದಾರೆ.
ಹೋರಿಯ ಹುಟ್ಟುಹಬ್ಬಕ್ಕೆ ಬಂದಿದ್ದ 20 ಕ್ಕೂ ಹೆಚ್ಚು ಯುವಕರು ರಕ್ತದಾನ ಮಾಡಿದ್ದಾರೆ. ರಕ್ತವನ್ನು ದಾವಣಗೆರೆಯ ಕರ್ನಾಟಕ ಹಿಮೋಫಿಲಿಯಾ ಸೊಸೈಟಿ ರಕ್ತ ಕೇಂದ್ರ ಸಂಗ್ರಹ ಮಾಡಿಕೊಂಡಿದೆ. ರಕ್ತ ಬೇಕಾದವರಿಗೆ ನೀಡುವುದಾಗಿ ತಿಳಿಸಿದ್ದಾರೆ. ಹಾವೇರಿ ಜಿಲ್ಲೆಯಲ್ಲಿನ ಯುವಕರಿಗೆ ಹೋರಿ ಎಂದರೆ ಎಲ್ಲಿಲ್ಲದ ಪ್ರೀತಿ. ಇಲ್ಲಿ ಹೋರಿ ಹಿಡಿಯುವ ಹಬ್ಬವನ್ನು ಹೆಚ್ಚಾಗಿ ಆಚರಿಸುತ್ತಾರೆ.








