ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ
ಬೆಂಗಳೂರು: ನಮ್ಮ ಮೆಟ್ರೊದಲ್ಲಿ ಪ್ರಯಾಣಿಸುವರಿಗೆ 1 ಹಾಗೂ 3 ದಿನದ ಪಾಸ್ ವಿತರಿಸಲು ಬಿಎಂಆರ್ಸಿಎಲ್ ನಿರ್ಧರಿಸಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದ ಬಿಎಂಆರ್ಸಿಎಲ್ ಏಪ್ರಿಲ್ 2 ರಿಂದ ಪಾಸ್ ಪ್ರಯಾಣಿಕರು ಪಡೆಯಬುದಾಗಿದ್ದು, 1 ದಿನದ ಪಾಸ್ ದರ 200 ರೂಪಾಯಿ ಮತ್ತು 3 ದಿನದ ಪಾಸ್ ದರ 400 ರೂಪಾಯಿ ನಿಗದಿಪಡಿಸಲಾಗಿದೆ. ಈ ಮೂಲಕ ಪ್ರಯಾಣಿಕರಿಗೆ ಬಿಎಂಆರ್ಸಿಎಲ್ ಸಿಹಿ ಸುದ್ದಿ ನೀಡಿದೆ. ಈ ಪಾಸ್ ಅನ್ನು ಖರೀದಿಸಿದ ಪ್ರಯಾಣಿಕರು ಅನಿಯಮಿತವಾಗಿ ಪ್ರಯಾಣಿಸಿಬಹುದಾಗಿದೆ ಎಂದು ತಿಳಿಸಿದೆ.
ಅಲ್ಲದೇ ಗ್ರಾಹಕ ಸಂಪರ್ಕ ಕೇಂದ್ರಗಳಲ್ಲಿ ಸ್ಮಾರ್ಟ್ ಕಾರ್ಡ್ ಮರಳಿಸಿದರೆ, ಪ್ರಯಾಣಿಕರು ಸಂದಾಯ ಮಾಡಿದ್ದ 50 ರೂ. ಭದ್ರತಾ ಠೇವಣಿ ಹಿಂಪಡೆಯಬಹುದು. ಈ ಪಾಸ್ ನ್ನು ಪ್ರಯಾಣಿಕರು ಆನ್ಲೈನ್ನಲ್ಲಿ ವೆಬ್ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್ ಮೂಲಕ ರೀಚಾರ್ಜ್ ಮಾಡಿದ ಮೊತ್ತವನ್ನು ಸ್ಮಾರ್ಟ್ ಕಾರ್ಡ್ಗೆ ಒಂದು ಗಂಟೆಯ ನಂತರ ಮತ್ತು ರೀಚಾರ್ಜ್ ಮಾಡಿದ ದಿನಾಂಕದಿಂದ 7 ದಿನಗಳ ಒಳಗೆ ಗೇಟ್ನಲ್ಲಿ ಟ್ಯಾಪ್ ಮಾಡುವ ಮೂಲಕ ಅಥವಾ ಕಾರ್ಡ್ ಟಾಪ್ – ಅಪ್ ಟರ್ಮಿನಲ್ಗಳಲ್ಲಿ ರೀಚಾರ್ಜ್ ಮಾಡಿದ ದಿನದಿಂದ 15 ದಿನಗಳಲ್ಲಿ ಪಾಸ್ ನವೀಕರಿಸಬಹುದು ಎಂದು ನಮ್ಮ ಮೆಟ್ರೊ ಸಂಸ್ಥೆ ತಿಳಿಸಿದೆ.
ಪ್ರಯಾಣಿಕರು ತಮ್ಮ ಸ್ಮಾರ್ಟ್ ಕಾರ್ಡ್ಗಳಲ್ಲಿನ ಬ್ಯಾಲೆನ್ಸ್ ಮೊತ್ತವನ್ನು 15 ದಿನಗಳ ಒಳಗೆ ನವೀಕರಿಸಲು ಸಾಧ್ಯವಾಗದಿದ್ದರೆ, ಅಂತಹ ಕ್ಲೈಮ್ ಮಾಡದ ಮೊತ್ತವನ್ನು ರೀಚಾರ್ಜ್ ಮಾಡಿದ ದಿನಾಂಕದಿಂದ 30 ದಿನಗಳ ಒಳಗೆ (ಅದೇ ಅಪ್ಲಿಕೇಶನ್ ಮೂಲಕ) ರಿಚಾರ್ಜ್ ಮಾಡಿದ ಮೊತ್ತದಿಂದ ಶೇ 2.5 ರದ್ವತಿ ಶುಲ್ಕ ಕಡಿತಗೊಳಿಸಿ ರೀಚಾರ್ಜ್ ಮೊತ್ತವನ್ನು ಮರುಪಾವತಿ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.