ಬೆಂಗಳೂರು: ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಬಿಎಂಟಿಸಿ ಒಂದೇ ದಿನದಲ್ಲಿ ಭರ್ಜರಿ ಆದಾಯ ಗಳಿಸಿದೆ. ಜ.1 ರಂದು ಬಿಎಂಟಿಸಿಯಲ್ಲಿ 27,09, 659 ಜನ ಪ್ರಯಾಣಿಕರು ಸಂಚಾರ ನಡೆಸಿದ್ದಾರೆ.
ನೂತನ ವರ್ಷಾಚರಣೆಯಲ್ಲಿ ಭಾಗಿಯಾಗಿದ್ದವರಿಗೆ ಹೆಚ್ಚುವರಿ ಬಸ್ ಗಳ ಸೇವೆ ಒದಗಿಸಲಾಗಿತ್ತು. ಪರಿಣಾಮ ಒಂದೇ ದಿನ ಬಿಎಂಟಿಸಿಗೆ 4,37,70,000 ರೂ. ಆದಾಯ ಹರಿದು ಬಂದಿದೆ. ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿಯ ವಿವಿಧೆಡೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಮಧ್ಯರಾತ್ರಿ 2 ಗಂಟೆವರೆಗೂ ಬಿಎಂಟಿಸಿ ಹೆಚ್ಚುವರಿ ಬಸ್ ಸೇವೆ ಇತ್ತು. ಎಂ.ಜಿ.ರೋಡ್, ಬ್ರಿಗೇಡ್ ರೋಡ್, ಇಂದಿರಾನಗರ, ಕೋರಮಂಗಲ, ಶಾಂತಿನಗರ, ಯಲಹಂಕ ಸೇರಿ ಹಲವು ನಿಲ್ದಾಣದಿಂದ ಬಸ್ ಸೇವೆ ಒದಗಿಸಲಾಗಿತ್ತು.
ಹೀಗಾಗಿ ಒಂದೇ ದಿನ ಬಿಎಂಟಿಸಿಗೆ 4.37 ಕೋಟಿ ರೂ.ಆದಾಯ ಹರಿದು ಬಂದಿದೆ.








