BMTC ಪ್ರಯಾಣಿಕರಿಗೆ ಬಿಗ್ ಶಾಕ್ – ಟಿಕೆಟ್ ದರ ಹೆಚ್ಚಳ ಸಾದ್ಯತೆ
ಸಿಲಿಕಾನ್ ಸಿಟಿ ಬೆಂಗಳೂರಿನ ನರನಾಡಿ ಬಿಎಂಟಿಸಿ ಬಸ್ ನಲ್ಲಿ ಸವಾರಿ ಮಾಡುವ ಮಧ್ಯಮ ವರ್ಗದ ಜನರಿಗೆ ಮತ್ತೊಮ್ಮೆ ಬೆಲೆ ಏರಿಕೆಯ ಬಿಸಿ ಮುಟ್ಟಲಿದೆ. ಬಿಎಂಟಿಸಿ ಬಸ್ ಟಿಕೆಟ್ ದರ ಏರಿಕೆ ಮಾಡುವಂತೆ ರಾಜ್ಯಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ತೈಲಬೆಲೆ ಗ್ಯಾಸ್ ಬೆಲೆ ಹೊಟೆಲ್ ತಿಂಡಿ ದರ ಏರಿಕೆಯ ನಂತರ ಬಿಎಂಟಿಸಿ ಟಿಕೆಟ್ ದರ ಹೆಚ್ಚಳದ ಆತಂಕ ಶುರುವಾಗಿದೆ. ಸತತ ನಷ್ಟ ಅನುಭವಿಸುತ್ತಿರುವ ಬಿಎಂಟಿಸಿ ಸಾಲದಿಂದ ಹೊರಬರಲು ಟಿಕೆಟ್ ದರ ಏರಿಕೆ ಅಗತ್ಯ ಎಂದು ಸಂಸ್ಥೆ ಹೇಳಿದೆ.
ಬಿಎಂಟಿಸಿ ಈಗಾಗಲೇ ಎರಡು ಭಾರಿ ಟಿಕೆಟ ಪ್ರಸ್ತಾಪವನ್ನ ಸರ್ಕಾರದ ಮುಂದಿಟ್ಟಿದೆ. ಮೊದಲ ಸಲ 20% ಪ್ರಸ್ತಾಪಿಸಿದ್ದ ಸಂಸ್ಥೆ ಈ ಭಾರಿ 35% ಪ್ರಸ್ತಾಪಿಸಿದೆ. ಆದರೆ ಒಂದೇ ಭಾರಿ ಇಷ್ಟು ಇಷ್ಟು ಪರ್ಸೆಂಟ್ ಏರಿಕೆ ಮಾಡುವ ಸಾಧ್ಯತೆ ಕಡಿಮೆ ಇದೆ. ಅಧಿಕಾರಿಗಳ ಜೊತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಸಿ ಎಂ ಬೊಮ್ಮಾಯಿ ಹೇಳಿದ್ದಾರೆ. ಅಕಸ್ಮಾತ್ ಸಿಎಂ ಹೇಳಿದ್ರೆ ಜನರ ಜೇಬಿಗೆ ಕತ್ತರಿ ಬೀಳೋದು ಖಚಿತ.








