Babiya crocodile -ತನ್ನ ಸೇವಾಬದುಕು ಮುಗಿಸಿದ ಶ್ರೀ ಕ್ಷೇತ್ರ ಅನಂತಪುರ ಶ್ರೀ ಅನಂತದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ ದೇವಾಲಯ ಪಾಲಕನಾಗಿದ್ದ ಮೊಸಳೆ ʼಬಾಬಿಯಾʼ
Cooking-ನವರಾತ್ರಿಯ ವಿಶೇಷ ಆಲೂ ಪಾಕವಿಧಾನಗಳು:
ನೆರೆಯ ಕಾಸರಗೋಡು ಜಿಲ್ಲೆಯ ಕುಂಬಳೆ ಸಮೀಪದ ಸರೋವರದ ಕ್ಷೇತ್ರ ನೀರಿನ ಮಧ್ಯೆ ಕೆರೆಯಲ್ಲಿ ವಾಸವಾಗಿದ್ದ “ದೈವಿ ಮೊಸಳೆ” ಬಬಿಯಾ ಹಲವಾರು ವರ್ಷಗಳಿಂದ ದೇವಸ್ಥಾನದ ಕೆರೆಯಲ್ಲಿ ವಾಸವಾಗಗಿತ್ತು.
ನಿತ್ಯದ ಪೂಜೆಯ ಬಳಿಕ ನೈವೇದ್ಯ ಪ್ರಸಾದ ಸ್ವಿಕರಿಸುತ್ತಿದ್ದ “ದೈವಿ ಮೊಸಳೆ” ಅಪ್ಪಟ ಸಸ್ಯಾಹಾರಿಯಾಗಿತ್ತು.
ದೇವಾಲಯದ ಅರ್ಚಕರು ಕೂಗಿ ಪ್ರಸಾದ ನೀಡುವ ವರೆಗೂ ಮೊಸಳೆ ಬರುತ್ತಿರಲಿಲ್ಲವಂತೆ,ಹಾಗೂ ಪ್ರಸಾದ ಅರ್ಪಿಸುವುದು ಅಲ್ಲಿನ ಸಂಪ್ರದಾಯವಾಗಿತ್ತು.
ಕೆಲ ವರ್ಷದ ಹಿಂದೆ ಧೀಡಿರ್ ಎಂದು ಕೆರೆಯಿಂದ ಹೊರಬಂದ ಬಬಿಯಾ ದೇವಾಲಯದ ಬಳಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿತ್ತು.
ನಮ್ಮೆಲ್ಲರಿಗೂ ತಿಳಿದಿರುವ ಹಾಗೆ ದೇವಸ್ಥಾನಗಳಲ್ಲಿ ಆನೆ, ಆಕಳು ಬಸವ ನಾಗರ ಹೀಗೆ ಹಲವಾರು ಪ್ರಾಣಿಗಳಿರುತ್ತವೆ. ಆದರೆ ಈ ದೇವಾಲಯದ ಕೆರೆಯ ನಡುವಿನಲ್ಲಿ ನೆಲೆಸಿರುವ ‘ಅನಂತಪದ್ಮನಾಭನಿಗೆ ಮೊಸಳೆ-ಬಬಿಯಾ’ ‘ಕಾವಲು ಕಾಯುವ ಕೆಲಸ’ ಮಾಡುವ ನಂಬಿಕೆ ಇತ್ತು.
ವರ್ಷವಿಡಿ ಶುದ್ಧ ನೀರಿನಿಂದ ತುಂಬಿರುವ ಈ ಕೆರೆಯಲ್ಲಿ ಮೊಸಳೆ ವಾಸವಾಗಿತ್ತು. ದೇವರ ನೈವೇದ್ಯ ವನ್ನು ತನ್ನ ನಿತ್ಯ ಆಹಾರ ವಾಗಿಸಿಕೊಂಡಿತ್ತು.
ದೇವಾಲಯದ ಸಿಭಂದಿಗಾಗಲಿ ಭಕ್ತರಿಗಾಗಲಿ ಒಮ್ಮೆಯೂ ಸಹ ಅಪಾಯವುಟುಮಾಡದ ಬಬಿಯಾ ಸ್ವಚ್ಛಂದವಾಗಿ ಜೀವನ ನಡೆಸುತ್ತಿತ್ತು.
ಅನಂತಪುರ ಕ್ಷೇತ್ರದಲ್ಲಿರುವ ಈ ಮೊಸಳೆ ಹೆಚ್ಚಿನ ಸಂದರ್ಭದಲ್ಲಿ ದೇವಾಲಯದ ಎಡಬದಿಯಲ್ಲಿರುವ ಗುಹೆಯಲ್ಲಿ ವಾಸಸ್ಥಾನ ವನಾಗಿಸಿಕೊಂಡಿತ್ತು.
ಈ ದೇವಾಲಯವು ಮಂಗಳೂರಿನಿಂದ ಸುಮಾರು 39 ಕಿ.ಮೀ ದೂರದ ಕುಂಬ್ಳೆಯಿಂದ ಬದಿಯಡ್ಕ ಮಾರ್ಗವಾಗಿ ಸುಮಾರು ನಾಲ್ಕು ಕಿಲೋಮೀಟರ್ ದೂರದಲ್ಲಿದೆ .
ತಿರುವಂತಪುರದ ಅನಂತಪದ್ಮನಾಭ ದೇವಾಲಯಕ್ಕೆ ಇದು ಮೂಲ ಸ್ಥಾನವೆಂಬುದು ಪುರಾಣ ಕಥೆಗಳಲ್ಲಿ ಕಂಡುಬರುತ್ತದೆ. ಇದೆ, ಕೆರೆಯ ಬದಿಯಲ್ಲಿ ಒಂದು ಸುರಂಗ ಮಾರ್ಗವಿದೆ, ಈ ಸುರಂಗದ ಮೂಲಕ ತಿರುವನಂತಪುರದ ದೇವಸ್ಥಾನವನ್ನು ತಲುಪಬಹುದು ಎಂದು ಹೇಳುತ್ತಾರೆ.
ದೇವಸ್ಥಾನದಲ್ಲಿ ವಿಗ್ರಹಕ್ಕೆ ‘ಕಡುಶರ್ಕರ ಪಾಕ’ದ ವಿಗ್ರಹ ಎಂದು ಹೇಳಲಾಗುತ್ತದೆ. ಕಾರಣ ಕಲ್ಲಿನಿಂದಲೂ ಲೋಹದಿಂದಲೂ ಕೆತ್ತಲ್ಪಟ್ಟ ಎಲ್ಲಾ ದೇವರ ಮೂರ್ತಿಯು ಸಂಪೂರ್ಣವಾಗಿ ಆಯುರ್ವೇದಗಳಿಂದ, ವಿವಿಧ ದ್ರವ್ಯಗಳ ಲೇಪನದಿಂದ ನಿರ್ಮಿತವಾಗಿರುತ್ತದೆ.
ಈ ದೇವಾಲಯದ ಹತ್ತಿರದಲ್ಲಿ ಶ್ರೀ ಮಹಾಗಣಪತಿಯ ಗುಡಿಯ ಇದೆ. ಅಷ್ಟೇ ಅಲ್ಲದೆ ಪುರಾತನ ಕಾಲದ ತುಳುಶಾಸನ ಇದೆ. ಪ್ರಧಾನ ದೇವಾಲಯದ ಬದಿಯಲ್ಲಿಯೇ ಗೋಪಾಲ ಕೃಷ್ಣ, ಸ್ವಲ್ಪ ದೂರದಲ್ಲಿ ರಕ್ತೇಶ್ವರಿ ಗುಡಿಯನ್ನೂ ಕಾಣಬಹುದು. ಹಾಗೆಯೇ ಶ್ರೀ ವನಶಾಸ್ತಾರ ಗುಡಿಯೂ ಇದೆ. ಗುಡಿ ಬಳಿಯೇ ಇನ್ನೊಂದು ಸಣ್ಣ ಕೆರೆ ಕಾಣುತ್ತದೆ.
The divine form of Babiya crocodile
Bobby’s Crocodile