ನಮ್ಮ ಮನೆಗಳಲ್ಲಿ ಸುಲಭವಾಗಿ ತಯಾರಿಸಬಹುದಾದ ವಾಂಗಿಬಾತ್ ಗೊಜ್ಜು, ಕೇವಲ 5 ನಿಮಿಷಗಳಲ್ಲಿ ಸಿದ್ಧವಾಗುತ್ತದೆ. ಈ ರುಚಿಕರ ಗೊಜ್ಜು
ಪದಾರ್ಥಗಳು:
– ಬೆಲ್ಲ
– ಈರುಳ್ಳಿ
– ಖಾರದ ಪುಡಿ
– ಉಪ್ಪು
– ಹುಣಸೆ ಹುಳಿ
– ಜೀರಿಗೆ
– ಸಾಸಿವೆ
– ಕಸೂರಿ ಮೇಥಿ
– ಬಿರಿಯಾನಿ ಎಲೆ
– ಕರಿಬೇವು
– ಟಮೆಟೋ
– ಬಿಳಿ ಬದನೆಕಾಯಿ
– ವಾಂಗಿಬಾತ್ ಪುಡಿ
ಮಾಡುವ ವಿಧಾನ:
ಹಂತ 1:
ಮೊದಲು, ಒಂದು ಉಂಡೆಯಷ್ಟು ಹುಣಸೆ ಹುಳಿಯ ರಸವನ್ನು ಹಿಂಡಿಕೊಂಡು ಬೌಲ್‌ಗೆ ಹಾಕಿ ಇಟ್ಟುಕೊಳ್ಳಿ. ನಂತರ ಈ ಬೌಲ್‌ಗೆ ಖಾರದ ಪುಡಿ, ಉಪ್ಪು, ಬೆಲ್ಲ ಹಾಕಿಕೊಂಡು ಚೆನ್ನಾಗಿ ಕಲಸಿಕೊಳ್ಳಿ. 1 ಸ್ಪೂನ್ ಬೆಲ್ಲ ಚೆನ್ನಾಗಿ ಕರಗಬೇಕು.
ಹಂತ 2:
ಈ ಮಿಶ್ರಣ ಬದಿಗಿಟ್ಟು, ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಳ್ಳಿ. ಎಣ್ಣೆ ಬಿಸಿಯಾದ ಬಳಿಕ, ಸಾಸಿವೆ, ಜೀರಿಗೆ, ಕಸೂರಿ ಮೇಥಿ, ಬಿರಿಯಾನಿ ಎಲೆ, ಕರಿಬೇವು, ಸಣ್ಣದಾಗಿ ಕತ್ತರಿಸಿದ ಈರುಳ್ಳಿಯನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ.
ಹಂತ 3:
1 ನಿಮಿಷದ ಬಳಿಕ, ಒಂದು ಟೊಮೆಟೋ ಹೆಚ್ಚಿಕೊಂಡು ಅದಕ್ಕೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. 1 ನಿಮಿಷದ ಬಳಿಕ, ಬಿಳಿ ಬದನೆಕಾಯಿಯನ್ನು ಹೆಚ್ಚಿಕೊಂಡು ಅದಕ್ಕೆ ಹಾಕಿ.
ಹಂತ 4:
ಬದನೆಕಾಯಿಯನ್ನು ನೀರಿಗೆ ಹಾಕಿಟ್ಟುಕೊಳ್ಳಿ. ನೀರಿನಿಂದ ತೆಗೆದು, ಬದನೆಕಾಯಿಯನ್ನು ಮಸಾಲೆಯ ಪಾತ್ರೆಗೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಎಳೆಯ ಬದನೆಕಾಯಿ ಅಡುಗೆಗೆ ಸೂಕ್ತ.
ಹಂತ 5:
ಮೊದಲು ರೆಡಿ ಮಾಡಿಕೊಂಡಿರುವ ಹುಣಸೆ ಹುಳಿಯ ರಸವನ್ನು ಇದಕ್ಕೆ ಹಾಕಿ. ನಂತರ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಸ್ವಲ್ಪ ನೀರು ಹಾಕಿ ಕುದಿಯಲು ಬಿಡಿ. ಮಸಾಲೆ ಕುದಿಯಲು ಆರಂಭಿಸಿದಾಗ, ವಾಂಗಿಬಾತ್ ಪುಡಿಯನ್ನು ಹಾಕಿ. ಅಂಗಡಿಯಲ್ಲಿ ಸಿಗುವ ಸಾಮಾನ್ಯ ವಾಂಗಿಬಾತ್ ಪುಡಿ ಸಾಕಾಗುತ್ತದೆ.
ಹಂತ 6:
ಈ ಪುಡಿ ಹಾಕಿದ ಬಳಿಕ, ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಒಲೆ ಆಫ್ ಮಾಡಿಕೊಳ್ಳಿ. 1 ನಿಮಿಷ ಬೇಯಿಸಿದರೆ ಸಾಕು. ಇದು ಗೊಜ್ಜು ಮಾಡುವ ವಿಧಾನವಾಗಿದೆ.
ನಿಮಗೆ ಎಷ್ಟು ಬೇಕೋ ಅಷ್ಟು ಅನ್ನ ತೆಗೆದುಕೊಂಡು, ಅದಕ್ಕೆ ಗೊಜ್ಜು ಹಾಕಿ ಕಲಸಿಕೊಂಡರೆ ನಿಮ್ಮ ಮುಂದೆ ವಾಂಗಿಬಾತ್ ರೆಡಿಯಾಗುತ್ತದೆ. ಈ ಗೊಜ್ಜನ್ನು ನೀವು ಹಲವು ವಾರಗಳ ಕಾಲ ಇಟ್ಟು, ಆಗಾಗ ವಾಂಗಿಬಾತ್ ಮಾಡಿ ಸವಿಯಬಹುದು. ನೀವು ಕೂಡ ಈ ವಾಂಗಿಬಾತ್ ಮಾಡಿ ಸವಿದು ನೋಡಿ.
.








