ಲಾಲ್ ಸಿಂಗ್ ಚಡ್ಡಾ ಮತ್ತು ರಕ್ಷಾ ಬಂಧನ್ ಚಿತ್ರಗಳ 3ನೇ ದಿನದ ಕಲೆಕ್ಷನ್ ಇಲ್ಲಿದೆ..
ಅಮೀರ್ ಖಾನ್ ಅಭಿನಯದ ‘ಲಾಲ್ ಸಿಂಗ್ ಚಡ್ಡಾ’ ಮತ್ತು ಅಕ್ಷಯ್ ಕುಮಾರ್ ಅವರ ‘ರಕ್ಷಾ ಬಂಧನ’ ಎರಡೂ ಚಿತ್ರಗಳು ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಸಾಧಾರಣ ಏರಿಕೆ ಕಂಡಿವೆ. ಎರಡನೇ ದಿನಕ್ಕೆ (ಶುಕ್ರವಾರ) ಹೋಲಿಸಿದರೆ ‘ಲಾಲ್ ಸಿಂಗ್ ಚಡ್ಡಾ’ 20% ಮತ್ತು ರಕ್ಷಾ ಬಂಧನ’ 10% ಕಲೆಕ್ಷನ್ ಹೆಚ್ಚಿಸಿಕೊಂಡಿವೆ.
ಎರಡೂ ಚಿತ್ರಗಳೂ ಮೂನೆ ದಿನ ತಮ್ಮ ಕಲೆಕ್ಷನ್ ಹೆಚ್ಚಿಸಿಕೊಂಡಿವೆ. ಆದರೆ, ಎರಡೂ ಚಿತ್ರಗಳ ಮೊದಲ ದಿನದ ಕಲೆಕ್ಷನ್ ಗೆ ಹೋಲಿಸಿದರೆ ಮೂರನೇ ದಿನದ ಕಲೆಕ್ಷನ್ ತುಂಬಾ ಕಡಿಮೆಯಾಗಿದೆ.
3 ದಿನದಲ್ಲಿ 27 ಕೋಟಿ ಗಳಿಸಿದ ಲಾಲ್ ಸಿಂಗ್ ಚಡ್ಡಾ
180 ಕೋಟಿ ಬಜೆಟ್ನಲ್ಲಿ ತಯಾರಾದ ‘ಲಾಲ್ ಸಿಂಗ್ ಚಡ್ಡಾ’ ಚಿತ್ರ ಮೂರನೇ ದಿನ (ಶನಿವಾರ) ಸುಮಾರು 8.75 ಕೋಟಿ ರುಪಾಯಿ ಗಳಿಸಿದೆ. ಎರಡನೇ ದಿನವಾದ ಶುಕ್ರವಾರ 7.26 ಕೋಟಿ ಕಲೆಕ್ಷನ್ ಮಾಡಿತ್ತು. ಮೊದಲ ದಿನ ಗುರುವಾರ 11.7 ಕೋಟಿ ಕಲೆಕ್ಷನ್ ಮಾಡಿತ್ತು. ಇಲ್ಲಿಯವರೆಗೆ 3 ದಿನಗಳಲ್ಲಿ ಭಾರತದಿಂದ 27.71 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
3 ದಿನದಲ್ಲಿ 21 ಕೋಟಿ ಗಳಿಸಿದ ರಕ್ಷಾಬಂಧನ
ಮತ್ತೊಂದೆಡೆ, 70 ಕೋಟಿ ಬಜೆಟ್ನಲ್ಲಿ ತಯಾರಾದ ‘ರಕ್ಷಾ ಬಂಧನ’ ಚಿತ್ರ ಮೂರನೇ ದಿನ ಸುಮಾರು 7 ಕೋಟಿ ರುಪಾಯಿ ಗಳಿಸಿದೆ. ಎರಡನೇ ದಿನ 6.4 ಕೋಟಿ ಕಲೆಕ್ಷನ್ ಮಾಡಿದ್ದು, ಮೊದಲ ದಿನ 8.2 ಕೋಟಿ ಕಲೆಕ್ಷನ್ ಮಾಡಿತ್ತು. ಚಿತ್ರ ಇಲ್ಲಿಯವರೆಗೆ 3 ದಿನಗಳಲ್ಲಿ ಭಾರತದಿಂದ 21.6 ಕೋಟಿ ರೂಪಾಯಿಗಳ ಕಲೆಕ್ಷನ್ ಮಾಡಿದೆ.
ಎರಡೂ ಚಿತ್ರಗಳ ಪ್ರದರ್ಶನ ರದ್ದು
ರಕ್ಷಾ ಬಂಧನ ಹಬ್ಬದ ಸಂದರ್ಭದಲ್ಲಿ ಆಗಸ್ಟ್ 11 ರಂದು ‘ಲಾಲ್ ಸಿಂಗ್ ಚಡ್ಡಾ’ ಮತ್ತು ‘ರಕ್ಷಾ ಬಂಧನ’ ಎರಡೂ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಎರಡೂ ಚಿತ್ರಗಳು ತಲಾ ಮೂರು ಸಾವಿರ ಪರದೆಗಳನ್ನ ಹಂಚಿಕೊಂಡಿದ್ದವು. ಗಲ್ಲಾಪೆಟ್ಟಿಗೆಯಲ್ಲಿ ಕಳಪೆ ಪ್ರದರ್ಶನ ನೀಡಿದ ನಂತರ ಎರಡೂ ಚಿತ್ರಗಳ ಹಲವು ಪ್ರದರ್ಶನಗಳನ್ನು ರದ್ದುಗೊಳಿಸಲಾಗಿದೆ.