ನಟ ಅನುಪಮ್ ಖೇರ್ ಟ್ವಿಟ್ಟರ್ ಖಾತೆಯಿಂದ 80 ಸಾವಿರ ಫಾಲೋವರ್ಸ್ ದಿಢೀರನೆ ನಾಪತ್ತೆಯಾಗಿದ್ದಕ್ಕೆ ಕಾರಣವೇನು..?
ಇತ್ತೀಚೆಗೆ ಪ್ರಸಿದ್ಧ ಜಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಕೆಲ ಎಡವಟ್ಟುಗಳು ವರದಿಯಾಗುತ್ತಿವೆ.. ಇತ್ತೀಚೆಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಟ್ವಿಟ್ಟರ್ ಕಾತೆಯಿಂದ ಬ್ಲ್ಯೂ ಟಿಕ್ ಮಾಯವಾಗಿತ್ತು.. ಇದೀಗ ಬಾಲಿವುಡ್ ನ ಹಿರಿಯ ನಟ, ನಿರ್ಮಾಪಕ ಅನುಪಮ್ ಖೇರ್ ಅವರ ಟ್ವಿಟ್ಟರ್ ಖಾತೆಯಿಂದ 80 ಸಾವಿರ ಫಾಲೋವರ್ಸ್ ನಾಪತ್ತೆಯಾಗಿದ್ದಾರೆ. ಕೆಲವೇ ಗಂಟೆಗಳಲ್ಲಿ ಇಷ್ಟು ಮಂದಿ ನಾಪತ್ತೆಯಾಗಿರುವುದನ್ನು ನೋಡಿ ಅನುಪಮ್ ಖೇರ್ ಶಾಕ್ ಆಗಿದ್ದಾರೆ. ದೀಢಿರ್ ನಾಪತ್ತೆಗೆ ಕಾರಣವೇನು ಎಂದು ಟ್ವಿಟ್ಟರ್ ಇಂಡಿಯಾಗೆ ಪ್ರಶ್ನೆ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅನುಪಮ್, ‘ಆತ್ಮೀಯ ಟ್ವಿಟ್ಟರ್ ಮತ್ತು ಟ್ವಿಟ್ಟರ್ ಇಂಡಿಯಾ, ಕಳೆದ 36 ಗಂಟೆಗಳಲ್ಲಿ ನನ್ನ ಖಾತೆಯಲ್ಲಿ 80,000 ಫಾಲೋವರ್ಸ್ ಕಡಿಮೆ ಆಗಿದ್ದಾರೆ. ನಿಮ್ಮ ಆಪ್ ನಲ್ಲಿ ಏನಾದರು ತೊಂದರೆ ಇದಿಯೇ ಅಥವಾ ಇನ್ನೇನಾದರೂ ನಡೆಯುತ್ತಿದೆಯೇ? ಇದು ಒಂದು ಅವಲೋಕನ. ನನ್ನ ದೂರ ಅಲ್ಲ’ ಎಂದು ಹೇಳಿದ್ದಾರೆ. ಅಂದ್ಹಾಗೆ ಈ ಹಿಂದೆ ಅಮಿತಾಬ್ ಬಚ್ಚನ್ ಮತ್ತು ಕಂಗನಾ ರಣಾವತ್ ಸಹ ಫಾಲೋವರ್ಸ್ ಕಳೆದುಕೊಂಡಿದ್ದಾರೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.