ಬಾಲಿವುಡ್ ನ ಖ್ಯಾತ ಯುವ ನಟ ತಮ್ಮ ಗರ್ಲ್ ಫ್ರೆಂಡ್ ಜೊತೆಗಿನ ಫೋಟೋವನ್ನನು ಸೋಷಿಯಲ್ ಮೀಡಿಯಾದಲ್ಲಲಿ ಶೇರ್ ಮಾಡಿಕೊಂಡಿದ್ದಾರೆ. ನಟ ವರುಣ್ ಧವನ್ ತಮ್ಮ ಬಹುಕಾಲದ ಪ್ರೇಯಸಿ ನತಾಶಾ ಜೊತೆಗಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದು, ಈ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗ್ತಾಯಿದೆ.
ಇನ್ಸ್ಟಾಗ್ರಾಂನಲ್ಲಿ ವರುಣ್ ಧವನ್ ಹಂಚಿಕೊಂಡಿರುವ ಚಿತ್ರದಲ್ಲಿ ಸ್ವಿಮ್ಮಿಂಗ್ ಪೂಲ್ ಪಕ್ಕ ವರುಣ್ ಧವನ್ ಹಾಗೂ ಪ್ರೇಯಸಿ ನತಾಶಾ ದಲಾಲ್ ನಿಂತಿರುವ ಚಿತ್ರವನ್ನು ಹಂಚಿಕೊಂಡಿದ್ದು, ಇದಕ್ಕೆ ‘ನೀನು ಪಕ್ಕ ಇದ್ದರೆ ಯಾವುದರ ಭಯವಿಲ್ಲ’ ಎಂದು ಕ್ಯಾಪ್ಷನ್ ನೀಡಿದ್ದಾರೆ. ಅಷ್ಟೇ ಅಲ್ಲ ವರುಣ್ ಅವರ ಪೋಸ್ಟ್ ಗೆ ಅಭಿಮಾನಿಗಳು ಫಿದಾ ಆಗಿರೋದು ಒಂದಾದ್ರೆ ಕರಿಶ್ಮಾ ಕಪೂರ್, ಮನಿಶ್ ಮಲ್ಹೋತ್ರಾ, ಮಹಿರಾ ಖಾನ್ ಸೇರಿದಂತೆ ಅನೇಕ ತಾರೆಯರು ಸಹ ಲೈಕ್ ಬಟನ್ ಒತ್ತಿದ್ದಾರೆ.
ವರುಣ್ ಧವನ್ ಹಾಗೂ ನತಾಶಾ ದಲಾಲ್ ಒಂದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ನತಾಶಾ ದಲಾಲ್ ಫ್ಯಾಷನ್ ಡಿಸೈನರ್ ಆಗಿದ್ದಾರೆ. ಎಲ್ಲಾ ಅಂದುಕೊಂಡಂತೆ ಕೊರೊನಾ ಬಿಕ್ಕಟ್ಟು ಇರದೇ ಹೋಗಿದ್ದರೆ ಇಷ್ಟೊತ್ತಿಗಾಗಲೇ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡಬೇಕಿತ್ತು. ಇದೀಗ ಮದುವೆ ಮುಂದಕ್ಕೆ ಹೋಗಿದೆ.
https://youtu.be/pDPQuy6Xvhk