ಬಾಲಿವುಡ್ ‘ಕ್ಯಾಟ್’ ಗೆ ಕೊರೊನಾ ಪಾಸಿಟಿವ್..!

1 min read

ಬಾಲಿವುಡ್ ‘ಕ್ಯಾಟ್’ ಗೆ ಕೊರೊನಾ ಪಾಸಿಟಿವ್..!

ಇತ್ತೀಚೆಗೆ ಸಿನಿಮಾ ತಾರೆಯರಿಗೆ ಹೆಚ್ಚಾಗಿ ಕೊರೊನಾ ಪಾಸಿಟಿವ್ ದೃಢವಾಗ್ತಿದೆ. ಇತ್ತೀಚೆಗೆ ನಟ ಅಕ್ಷಯ್ ಕುಮಾರ್, ಆಲಿಯಾ ಭಟ್, ಗೋವಿಂದ, ಸ್ಯಾಂಡಲ್ ವುಡ್ ನಲ್ಲಿ ಪ್ರಜ್ವಲ್ ದೇವರಾಜ್ ಹಾಗೂ ಪತ್ನಿ ಹೀಗೆ ಅನೇಕರಿಗೆ ಕೊರೊನಾ ಸೋಂಕು ತಗುಲಿದೆ. ಇದೀಗ ಮತ್ತೋರ್ವ ಬಾಲಿವುಡ್ ಖ್ಯಾತ ನಟಿಗೆ ಕೊರೊನಾ ಪಾಸಿಟಿವ್ ಆಗಿದೆ.

ನಟಿ ಕತ್ರೀನಾ ಕೈಫ್ ಗೆ ಸೋಂಕು ತಗುಲಿರುವುದು ಧೃಢವಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ಸ್ಪಷ್ಟಪಡಿಸಿರುವ ಕ್ಯಾಟ್.. ‘ನಾನು ಕೊರೊನಾ ಟೆಸ್ಟ್ ಮಾಡಿಸಿದ್ದೇನೆ. ಈ ವೇಳೆ ನನಗೆ ಕೊರೊನಾ ಪಾಸಿಟಿವ್ ಆಗಿದೆ. ಹಾಗಾಗಿ ನಾನು ಹೋಂ ಕ್ವಾರಂಟೈನ್ ಒಳಗಾಗಿದ್ದೇನೆ ಹಾಗೂ ನನಗೆ ವೈದ್ಯರು ತಿಳಿಸಿರುವ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುತ್ತಿದ್ದೇನೆ’ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ.

ಸಾರಾ ಆಲಿ ಖಾನ್ ಮತ್ತು‌ ಹಿರಿಯ ನಟ ದಿಲೀಪ್ ಕುಮಾರ್ ನಡುವಿನ ಸಂಬಂಧವೇನು?

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd