ಬಾಲಿವುಡ್ ನ ಖ್ಯಾತ ನಟಿ, ಗಾಯಕಿ ಮತ್ತು ರಾಜಕಾರಣಿ ಕಿರಣ್ ಖೇರ್ ಗೆ ಕ್ಯಾನ್ಸರ್..!
ಬಾಲಿವುಡ್ ನ ಖ್ಯಾತ ನಟಿ, ಗಾಯಕಿ ಹಾಗೂ ರಾಜಕಾರಣಿಯಾಗಿ ಗುರುತಿಸಿಕೊಂಡಿರುವ ಕಿರಣ್ ಖೇರ್ ಅವರಿಗೆ ಕ್ಯಾನ್ಸರ್ ಇರುವುದು ಖಚಿತವಾಗಿದೆ. ಚಂಡೀಗಢದ ಸಂಸದೆಯಾಗಿರುವ ಕಿರಣ್ ಖೇರ್ ಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಸದ್ಯ ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ನಟಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಬಗ್ಗೆ ಚಂಡೀಗಢದ ಬಿಜೆಪಿ ಅಧ್ಯಕ್ಷ ಅರುಣ್ ಸೂದ್ ಅವರು ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ. ಅಂದ್ಹಾಗೆ ಕೇರ್ ಅವರು ಕಳೆದ ವರ್ಷದಿಂದಲೇ ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅರುಣ್ ಅವರು ತಿಳಿಸಿದ್ದಾರೆ.
ಕಿರಣ್ ಖೇರ್ ಕಳೆದ ವರ್ಷ ನವೆಂಬರ್ನಲ್ಲಿ ತನ್ನ ಚಂಡೀಗಢ್ ನಿವಾಸದಲ್ಲಿ ಎಡಗೈಗೆ ಗಾಯ ಮಾಡಿದ್ದ ಕಿರಣ್ ಖೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಈ ಸಮಯದಲ್ಲಿ ಕಿರಣ್ ಖೇರ್ ಅನಾರೋಗ್ಯದಿಂದ ಬಳಲುತ್ತಿದ್ದ ಬಗ್ಗೆ ಬಹಿರಂಗವಾಗಿದೆ.
ಸದ್ಯ ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗಿರುವ ಕಿರಣ್ ಖೇರ್ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಆಗಾಗ ಕೋಕಿಲಾಬೆನ್ ಆಸ್ಪತ್ರೆಗೆ ಭೇಟಿ ಆರೋಗ್ಯ ತಪಾಸಣೆ ನಡೆಸಿಕೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ.
ರಶ್ಮಿಕಾಗೆ 2ನೇ ಚಾನ್ಸೂ ಮಿಸ್… ‘ದಳಪತಿ’ಗೆ 2ನೇ ನಾಯಕಿ ಈ ಸ್ಟಾರ್ ನಟಿ..!
ಅಲ್ಲು ಅರ್ಜುನ್ ಅಭಿನಯದ ಪುಷ್ಪಾ ರಿಲೀಸ್ ಮುಂದೂಡಿಕೆ..?
‘ಮಾವ ‘ಡರ್ ಪೋಕ್’ ಎಂದ ನಿಧಿ… ಆದ್ರೆ ಸಂಬರಗಿ ನಿಲುವೇ ಬೇರೆ ಎಂದ ಶುಭಾ..!
ಪಾಪ ಮನೆಯ ಕಿರಿಯ ಕ್ಯಾಪ್ಟನ್ ವಿಶ್ವನ ವಿರುದ್ಧ ಆರೋಪ ಮಾಡಿದ್ದೇಕೆ ನಿಧಿ..!