ಬಾಲಿವುಡ್ ನ ಸ್ಟಾರ್ ನಟರಿಗೆ ಸಂಕಷ್ಟ – 38 ಸೆಲೆಬ್ರಿಟಿಗಳ ವಿರುದ್ಧ ದೂರು ದಾಖಲು

1 min read

ಬಾಲಿವುಡ್ ನ ಸ್ಟಾರ್ ನಟರಿಗೆ ಸಂಕಷ್ಟ – 38 ಸೆಲೆಬ್ರಿಟಿಗಳ ವಿರುದ್ಧ ದೂರು ದಾಖಲು

2 ವರ್ಷಗಳ ಹಿಂದೆ ಇಡೀ ಭಾರತವನ್ನೇ ಬೆಚ್ಚಿ ಬೀಳಿಸಿದ್ದ ‘ದಿಶಾ ಅತ್ಯಾಚಾರ ಪ್ರಕರಣ’ ಸಂಬಂಧ ಇದೀಗ ಬಾಲಿವುಡ್ ಹಾಗೂ ಟಾಲಿವುಡ್ ಸೇರಿದಂತೆ 38 ಸ್ಟಾರ್  ಗಳ ವಿರುದ್ಧ ಕೇಸ್ ದಾಖಲಾಗಿದೆ.. 2ವರ್ಷಗಳ ಹಿಂದೆ ಹೈದ್ರಾಬಾದ್ ನಲ್ಲಿ ಕಾಮುಕರು ಪಶುವೈದ್ಯಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಆಕೆಯನ್ನ ಜೀವಂತವಾಗಿ ಸುಟ್ಟುಹಾಕಿದ್ದರು. ಪ್ರತಿಯಾಗಿ ಪೊಲೀಸರು ಆ ನಾಲ್ವರನ್ನೂ ಅದೇ ವಾರದಲ್ಲೇ ಎನ್ ಕೌಂಟರ್ ಮಾಡಿ ಬಿಸಾಕಿದ್ದರು. ಈ ಪ್ರಕರಣವು ದೇಶಾದ್ಯಂತ ಸಂಚಲನ ಸೃಷ್ಟಿ ಮಾಡಿತ್ತು. ಆ ವೇಳೆ ಈ ಕೇಸ್ ಬಗ್ಗೆ ಅನೇಕ ಸೆಲೆಬ್ರಿಟಿಗಳು ಟ್ವೀಟ್ ಮಾಡೋ ಭರದಲ್ಲಿ ಸಂತ್ರಸ್ತೆಯ ನಿಜವಾದ ಹೆಸರನ್ನ ರಿವೀಲ್ ಮಾಡಿದ್ದರು ಎಂದು ದೆಹಲಿಯ ವಕೀಲರಾದ ಗೌರವ್ ಗುಲಾಟಿ ಅವರು ಅರ್ಜಿ ಸಲ್ಲಿಸಿದ್ದು 38 ಜನ ಸೆಲೆಬ್ರಟಿಗಳನ್ನ ಅರೆಸ್ಟ್ ಮಾಡುವಂತೆ ಕೋರಿದ್ದರು.

ಇದೇ   ಆಧಾರದ ಮೇಲೆ ಬಾಲಿವುಡ್ ಮತ್ತು ಟಾಲಿವುಡ್ ನ ಜನಪ್ರಿಯ ನಟ ನಟಿಯರಾದ ರವಿತೇಜ, ರಕುಲ್ ಪ್ರೀತ್, ಸಲ್ಮಾನ್ ಖಾನ್ , ಅಕ್ಷಯ್ ಕುಮಾರ್ ಸೇರಿದಂತೆ ಒಟ್ಟು 38 ಜನರ ವಿರುದ್ಧ ಕೇಸ್ ದಾಖಲಾಗಿದೆ.   TOI ಯ ವರದಿಯ ಪ್ರಕಾರ, ಅನುಪಮ್ ಖೇರ್, ಫರ್ಹಾನ್ ಅಖ್ತರ್, ಅಜಯ್ ದೇವಗನ್, ಅಕ್ಷಯ್ ಕುಮಾರ್, ಸಲ್ಮಾನ್ ಖಾನ್,  ರವಿತೇಜಾ, ರಕುಲ್ ಪ್ರೀತ್ ಸಿಂಗ್, ಅಲ್ಲು ಸಿರೀಶ್, ಚಾರ್ಮಿ ಕೌರ್ ಸೇರಿದಂತೆ ಒಟ್ಟು 38 ಸೆಲೆಬ್ರಿಟಿಗಳ ವಿರುದ್ಧ ದೂರು ದಾಖಲಾಗಿದೆ. ಸಬ್ಜಿ ಮಂಡಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 228 ಎ ಅಡಿಯಲ್ಲಿ ವಕೀಲರಾದ ಗೌರವ್ ಗುಲಾಟಿ ಅವರು ಕೇಸ್ ದಾಖಲು ಮಾಡಿದ್ದಾರೆ.

ಈ ಕೃತ್ಯವನ್ನು ನಿಷೇಧಿಸುವ ಕಾನೂನಿನ ಹೊರತಾಗಿಯೂ ಸೆಲೆಬ್ರಿಟಿಗಳು ಅತ್ಯಾಚಾರ ಸಂತ್ರಸ್ತೆಯ ಹೆಸರನ್ನು ಬಹಿರಂಗಪಡಿಸಿದ್ದಾರೆ ಎಂದು ಗುಲಾಟಿ ಆರೋಪಿಸಿದ್ದಾರೆ. ಸಂತ್ರಸ್ತೆಯ ಹೆಸರನ್ನು ಬಹಿರಂಗಪಡಿಸದೆ ಇತರರಿಗೆ ಉದಾಹರಣೆ ನೀಡುವ ಬದಲು ಸೆಲೆಬ್ರಿಟಿಗಳು ಈ ಪ್ರಕರಣವನ್ನು ದಾಖಲಿಸಿದ್ದಾರೆ, ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಆಕೆಯ ನೈಜ ಗುರುತನ್ನು ಬಹಿರಂಗಪಡಿಸುವ ಮೂಲಕ ಅವರು ನಿಯಮವನ್ನು ಉಲ್ಲಂಘಿಸಿದ್ದಾರೆ.  ಸಂತ್ರಸ್ತೆಯ  ಗೌಪ್ಯತೆಯನ್ನು ಕಾಪಾಡಿಕೊಳ್ಳುವಾಗ ಅವರು ಯಾವುದೇ ಸಾಮಾಜಿಕ ಜವಾಬ್ದಾರಿಯನ್ನು ತೋರಿಸಿಲ್ಲ ಎಂದು ಆರೋಪಿಸಿ, ದೂರಿನಲ್ಲಿರುವ ಎಲ್ಲಾ ಸೆಲೆಬ್ರಿಟಿಗಳನ್ನು ತಕ್ಷಣವೇ ಬಂಧಿಸುವಂತೆ ಕೋರಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd