ಮುಂಬೈ: ಡ್ರಗ್ಸ್ ಲಿಂಕ್ ಆರೋಪ ಪ್ರಕರಣ ಸಂಬಂಧ ಬಾಲಿವುಡ್ ನ ಸ್ಟಾರ್ ನಟಿ ದೀಪಿಕಾ ಪಡುಕೋಣೆ ಇಂದು ಎನ್ ಸಿಬಿ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.
ಇನ್ನೂ ಡಿಂಪಲ್ ಕ್ವೀನ್ ದೀಪಿಕಾಗೆ ಶುಕ್ರವಾರ ವಿಚಾರಣೆಗೆ ಹಾಜರಾಗುವಂತೆ NCB ನೋಟಿಸ್ ನೀಡಿತ್ತು. ಆದರೆ ದೀಪಿಕಾ ಶನಿವಾರ ಅಂರೆ ಇಂದು ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದರು. ಅದರಂತೆ ಇಂದು ವಿಚಾರಣೆಗೆ ತೆರಳಿದ್ದಾರೆ.
ನಟಿ ರಿಯಾ ಚಕ್ರವರ್ತಿ ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದು, ಆಕೆಯ ಹೇಳಿಕೆಯಲ್ಲಿ ಅನೇಕರ ಹೆಸರುಗಳು ಬಹಿರಂಗವಾಗಗಿತ್ತು ಎನ್ನಲಾಗಿದೆ. ಅದರಂತೆ ದೀಪಿಕಾ ಪಡುಕೋಣೆ, ರಕುಲ್ ಪ್ರೀತ್, ಸಾರಾ ಅಲಿ ಖಾನ್, ಶ್ರದ್ಧಾ ಕಪೂರ್ ಗೆ NCB ನೋಟೀಸ್ ಜಾರಿ ಮಾಡಿದೆ. ನಿನ್ನೆ ಅಂದರೆ ಸೆ. 25ಕ್ಕೆ ರಕುಲ್ ಪ್ರೀತ್ NCB ಎದುರು ವಿಚಾರಣೆಗೆ ಹಾಜರಾಗಿದ್ದರು.
ಇಂದು ದೀಪಿಕಾ ವಿಚಾರಣೆಗೆ ತೆರಳಿದ್ದಾರೆ. ಇನ್ನೂ ದೀಪಿಕಾ ಡ್ರಗ್ಸ್’ಗೆ ಬೇಡಿಕೆ ಇಟ್ಟಿದ್ದ ವಾಟ್ಸಾಪ್ ಚಾಟ್ ಒಂದು ಹರಿದಾಡಿತ್ತು. ಕ್ವಾನ್ ಕಂಪನಿಯಲ್ಲಿ ಟ್ಯಾಲೆಟ್ ಮ್ಯಾನೇಜರ್ ಆಗಿರುವ ಜಯಾ ಸಹಾ ಎಂಬಾಕೆ ಕ್ರಿಯೇಟ್ ಮಾಡಿದ್ದ ಗ್ರೂಪ್ ಗೆ ದೀಪಿಕಾ ಅವರು ಅಡ್ಮಿನ್ ಆಗಿದ್ದರು ಎಂಬ ಮಾಹಿತಿಯೂ ಸಿಕ್ಕಿದೆ. ಹೀಗಾಗಿಯೇ ದೀಪಿಕಾಗೂ ಡ್ರಗ್ಸ್ ನಂಟಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ದೀಪಿಕಾ ಪಡುಕೋಣೆಯವರ ಮ್ಯಾನೇಜರ್ ಕರೀಶ್ಮಾ ಪ್ರಕಾಶ್, ನಟಿಯರಾದ ಶ್ರದ್ಧಾ ಕಪೂರ್ ಮತ್ತು ಸಾರಾ ಅಲಿಖಾನ್ ಸಹ ಇಂದು ವಿಚಾರಣೆ ಎದುರಿಸಲಿದ್ದಾರೆ. ಕರೀಶ್ಮಾ ಪ್ರಕಾಶ್ ನಿನ್ನೆಯೂ ವಿಚಾರಣೆ ಎದುರಿಸಿದ್ದು, ಉಳಿದ ವಿಚಾರಣೆ ಇಂದು ಪೂರ್ಣಗೊಳ್ಳಲಿದೆ. ಕರೀಶ್ಮಾ ವಾಟ್ಸ್ಆಯಪ್ ಚಾಟ್ಗಳಲ್ಲಿ ಡಿ ಎಂಬ ಸಂಕೇತಾಕ್ಷರದೊಂದಿಗೆ ಡ್ರಗ್ಸ್ ಕುರಿತ ಮಾತುಕತೆ ನಡೆದಿದೆ ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.
ಒಟ್ಟಾರೆ ಡ್ರಗ್ಸ್ ಲಿಂಕ್ ನಲ್ಲಿ ಬಾಲಿವುಡ್ ಸ್ಟಾರ್ ನಟಿಯರಿಗೆ ಕಂಟಕ ಶುರುವಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ದೊಡ್ಡ ಕುಳಗಳಿಗೆ ನಶೆ “ಅನುಬಂಧ”ವಿರುವ ವಿಚಾರ ಬೆಳಕಿಗೆ ಬರುವ ಸಾಧ್ಯತೆಯಿದೆ. ಇನ್ನೂ ಅನೇಕ ತಾರೆಯರಿಗೆ ನಶೆ ಕಂಟಕ ಎದುರಾಗುವ ಸಾಧಧ್ಯತೆಯಿದೆ ಎನ್ನಲಾಗುತ್ತಿದೆ.