ಬಾಲಿವುಡ್ ನ ಸಂಗೀತ ನಿರ್ದೇಶಕ ಶ್ರವಣ್ ರಾಥೋಡ್ ಕೊರೊನಾಗೆ ಬಲಿ

1 min read

ಬಾಲಿವುಡ್ ನ ಸಂಗೀತ ನಿರ್ದೇಶಕ ಶ್ರವಣ್ ರಾಥೋಡ್ ಕೊರೊನಾಗೆ ಬಲಿ

ಮುಂಬೈ : ಬಾಲಿವುಡ್ ನ ಖ್ಯಾತ ಸಂಗೀತ ನಿರ್ದೇಶಕ ಶ್ರವಣ್ ರಾಥೋಡ್ ಕೊರೊನಾ ಮಹಾಮಾರಿಗೆ ಬಲಿಯಾಗಿದ್ದಾರೆ. ಮುಂಬೈನ ಎಸ್ಎuಲ್ ರೆಹಜಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ.

ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಶ್ರವಣ್ ಅವರು ಕೊರೆನಾ ಸೋಂಕಿಗೆ ತುತ್ತಾಗಿದ್ದಾರೆ. ಉಸಿರಾಟ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆ ವೆಂಟಿಲೇಟರ್ ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಹೃದಯ ಸಂಬಂಧಿ, ಮುಧುಮೇಹದಿಂದ ಬಳಲುತ್ತಿದ್ದ ಶ್ರವಣ್, ಕೊರೊನಾ ಸೋಂಕು ತಗಲುತ್ತಿದ್ದಂತೆ ಅವರ ಆರೋಗ್ಯ ಸಂಪೂರ್ಣ ಹದೆಗಟ್ಟಿತ್ತು ಎಂದು ಎಸ್ಎಲ್ ರೆಹಜಾ ಆಸ್ಪತ್ರೆಯ ವೈದ್ಯರು ತಿಳಿಸಿದಾರೆ.

ಶ್ರವಣ್ ಅವರ ಸಂಪರ್ಕದಲ್ಲಿದ್ದ ಪುತ್ರ ಸಂಜೀವ್ ರಾಥೋಡ್ ವರದಿ ಸಹ ಪಾಸಿಟಿವ್ ಬಂದಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಶ್ರವಣ್ ಅವರು 66ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. 90ರ ದಶಕದಲ್ಲಿ ನದೀಮ್-ಶ್ರವಣ್ ಜೋಡಿ ಬಾಲಿವುಡ್ಗೆ ಸೂಪರ್ ಹಿಟ್ ಹಾಡುಗಳನ್ನ ನೀಡಿತ್ತು.

BIGGBOSS 8 : ಈ ವಾರವೂ ವೀಕೆಂಡ್ ನಲ್ಲಿ ಕಿಚ್ಚ ಸುದೀಪ್ ದರ್ಶನವಾಗಲ್ಲ..!

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd