BIGGBOSS 8 : ಈ ವಾರವೂ ವೀಕೆಂಡ್ ನಲ್ಲಿ ಕಿಚ್ಚ ಸುದೀಪ್ ದರ್ಶನವಾಗಲ್ಲ..!
ಬೆಂಗಳೂರು :ಕಳೆದ ವಾರ ಕಿಚ್ಚ ಸುದೀಪ್ ಅನಾರೋಗ್ಯದಿಂದಾಗಿ ಕಿಚ್ಚ ಸುದೀಪ್ ಅವರು ವೀಕೆಂಡ್ ನಲ್ಲಿ ಬಿಗ್ ಬಾಸ್ ನಬಿರೂಪಣೆ ಮಾಡಿರಲಿಲ್ಲ. ಅಭಿಮಾನಿಗಳು ಕಿಚ್ಚ ಸುದೀಪ್ ಅವರನ್ನ ತುಂಬಾನೆ ಮಿಸ್ ಮಾಡಿಕೊಂಡಿದ್ದರು. ಯಾಕಂದ್ರೆ ಬಿಗ್ ಬಾಸ್ ಅಂದ್ರೆ ಕಿಚ್ಚ ಸುದೀಪ್ ಅನ್ನೋ ಅಷ್ಟರ ಮಟ್ಟಿಗೆ ಜನರ ಮನಸಲ್ಲಿ ಕಿಚ್ಚ ಸುದೀಪ್ ನೆಲೆಸಿಬಿಟ್ಟಿದ್ದಾರೆ. ಹೀಗಿರೋವಾಗ ಅವರ ಜಾಗದಲ್ಲಿ ಮತ್ತೊಬ್ಬರನ್ನ ಇಮಾಜಿನ್ ಮಾಡಿಕೊಳ್ಳುವುದೂ ಕೂಡ ಕಷ್ಟ. ಅಂತಹದ್ರಲ್ಲಿ ಈ ವಾರವೂ ಸುದೀಪ್ ಅವರು ಬಿಗ್ ಬಾಸ್ ನಿರೂಪಣೆ ಮಾಡ್ತಿಲ್ಲ ಎಂದು ಟ್ವೀಟ್ ಮಾಡುವ ಮೂಲಕ ಮತ್ತೊಮ್ಮೆ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ.
ಹೌದು.. ಕಳೆದ ವಾರ ಸುದೀಪ್ ಬದಲಾಗಿ ಬೇರೆಯವರು ನಿರೂಪಣೆ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಮೂ¯ಗಳ ಪ್ರಕಾರ ವೀಕೆಂಡ್ ನಲ್ಲಿ ಸುದೀಪ್ ಅವರ ಬದಲಾಗಿ ಸ್ಟೇಜ್ ಮೇಲೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿಗಳು ಹರಿದಾಡಿತ್ತು. ಆದ್ರೆ ಮೊದಲು ಕಿಚ್ಚನ ಆರೋಗ್ಯ ಮುಖ್ಯ ಮುಂದಿನವಾರ ಅವರನ್ನ ನೋಡಬಹುದು ಎಂದುಕೊಂಡಿದ್ದ ಮ್ಯಾನ್ಸ್ ಈಗ ಮತ್ತೊಮ್ಮೆ ಹತಾಶರಾಗಿದ್ದಾರೆ.
ಈ ಕುರಿತು ಸ್ವತಃ ಕಿಚ್ಚ ಟ್ವೀಟ್ ಮಾಡಿದ್ದು, ನಾನು ಈ ವಾರದ ಬಿಗ್ಬಾಸ್ ವೀಕೆಂಡ್ ಎಪಿಸೋಡ್ ಮಿಸ್ ಮಾಡಿಕೊಳ್ಳುತ್ತಿದ್ದು, ನನಗೆ ಆರೋಗ್ಯ ಸರಿಯಿಲ್ಲದ ಕಾರಣ ರೆಸ್ಟ್ ಬೇಕಾಗಿದೆ. ಆದರೂ ಕೂಡ ನಾನು ವೇದಿಕೆಯಲ್ಲಿ ಕೆಲಗಂಟೆಗಳನ್ನು ಕಳೆದು ಎಲ್ಲಾ ಸ್ಪರ್ಧಿಗಳಿಗೆ ನ್ಯಾಯ ಒದಗಿಸಿಕೊಡಬಹುದು. ಆದರೆ ಇದು ಕಷ್ಟಕರವಾದ ನಿರ್ಧಾರ. ಹಾಗಾಗಿ ವಾಹಿನಿ ಈ ವಾರವು ವೀಕೆಂಡ್ ಎಪಿಸೋಡ್ನಿಂದ ನನಗೆ ದೂರವಿರಲು ಅವಕಾಶ ಮಾಡಿಕೊಟ್ಟಿದೆ. ಬಿಗ್ಬಾಸ್ ತಂಡಕ್ಕೆ ನಾನು ಧನ್ಯವಾದ ಅರ್ಪಿಸುತ್ತೇನೆ. ನನಗಾಗಿ ಪ್ರಾರ್ಥಿಸಿದ ಅಭಿಮಾನಿಗಳೆಲ್ಲರಿಗೂ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.
ಈ ನಡುವೆ ಕಿಚ್ಚ ಅನಾರೋಗ್ಯಕ್ಕೀಡಾಗಿರುವುದು ಅವರ ಅಭಿಮಾನಿಗಳಲ್ಲಿ ಭಾರೀ ಅತಂಕ ಉಂಟುಮಾಡಿದೆ. ಅಭಿಮಾನಿಗಳು ಬೇಗ ಗುಣಮುಖರಾಗಿ ಬನ್ನಿ ಎಂಬುದಾಗಿ ಮನವಿ ಮಾಡಿಕೊಳ್ಳುತ್ತಿದ್ದು, ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದು, ಆದಷ್ಟು ಬೇಗ ಮರಳಿ ಬನ್ನಿ ಎಂದು ಹಾರೈಸಿದ್ದಾರೆ.
ಅಂಬಾನಿ ಪತ್ನಿ ಟೀನಾ ಮುನಿಮ್ ಬಾಲಿವುಡ್ ತಾರೆಯಾಗಲು ಕಾರಣರಾದ ಸೂಪರ್ ಸ್ಟಾರ್ ಯಾರು ಗೊತ್ತಾ?