Bollywood : ಬಾಲಿವುಡ್ ರೀಮೆಕ್ ಮಾಡುವುದರಲ್ಲಿ ನಿರತವಾಗಿದೆ , ನಿರ್ದೆಶಕರಲ್ಲಿ ಸ್ವಂತದ ಯೋಚನೆ ಇಲ್ಲ : ನೀಲ್
ಬಾಲಿವುಡ್ ಅನ್ನೋಕಿಂತ ಈಗೆಲ್ಲಾ ಕಾಪಿವುಡ್ ಅನ್ನೋ ಹೆಸರು ಸರಿಯಾಗಿ ಸ್ಯೂಟ್ ಆಗುತ್ತೆ.. ರೀಮೇಕ್ ವುಡ್ ಆಗಿ ಮಾರ್ಪಾಡಾಗಿರೋ ಬಾಲಿವುಡ್ ನಸೀಬ್ ಸದ್ಯಕ್ಕೆ ಖರಾಬಾಗಿದೆ.. ಬಾಲಿವುಡ್ ಸೌತ್ ಮುಂದೆ ಡಲ್ ಆಗಿದೆ… ಸಾಲು ಸಾಲು ಫ್ಲಾಪ್ ಗಳ ನಡುವೆ ಒಂದೋ ಎರೆಡೋ ಹಿಟ್ ಕೊಟ್ಟಿದೆ.. ಅಂದು ರೀತಿ ಬಾಲಿವುಡ್ ಅವನತಿಯ ಅಂಚಿನಲ್ಲಿದೆ ಅಂದ್ರೂ ತಪ್ಪಾಗಲಾರದು.. 2022 ರಲ್ಲಿ ಬಾಲಿವುಡ್ ನಲ್ಲಿ ದಿ ಕಾಶ್ಮೀರ್ ಫೈಲ್ಸ್ , ಭೂಲ್ ಭುಲಯ್ಯ ಬಿಟ್ರೆ ಮಿಕ್ಕೆಲ್ಲಾ ಅಷ್ಟಕಷ್ಟೇ,, ಬಾಲಿವುಡ್ ಅದಪತನಕ್ಕೆ ಕಾರಣವೇ ಕಾಪಿ… ಕಾಪಿ,. ಕಾಪಿ… ಇನ್ನೂ ಮುಂದೆ ಸಾಕಷ್ಟು ಸೌತ್ ಸಿನಿಮಾಗಳ ರೀಮೇಕ್ ಸಿನಿಮಾಗಳು ಬರಲಿವೆ… ಸೂರರೈ ಪೊಟ್ರು , ಕೈದಿ , ಯೂ ಟರ್ನ್ , ಅಲಾ ವೈಕುಂಠಪುರಂಲೋ ಹೀಗೆ ಸಾಕಷ್ಟು ಸಿನಿಮಾಗಳ ರೀಮೇಕ್ ಗಳು ಇನ್ನೂ ರಿಲೀಸ್ ಆಗಲಿವೆ..
ಬಾಲಿವುಡ್ ಸ್ಟಾರ್ ಗಳೇ ಬಾಲಿವುಡ್ ನ ಟೀಕಿಸುವ ಮಟ್ಟಕ್ಕೆ ಬಂದು ತಲುಪಿದೆ ಸೋ ಕಾಲ್ಡ್ ಬಿಗ್ ಇಂಡಸ್ಟ್ರಿ ಎನಿಸಿಕೊಂಡಿರುವ ಬಾಲಿವುಡ್.. ಇದೀಗ ಬಾಲಿವುಡ್ ನಟ ನೀಲ್ ನಿತಿನ್ ಮುಖೇಶ್ ಸಹ ಬಾಲಿವುಡ್ ಅನ್ನು ಟೀಕಿಸಿದ್ದಾರೆ.
ಬಾಲಿವುಡ್ ನಿರ್ದೆಶಕರಲ್ಲಿ ಸ್ವಂತದ ಯೋಚನೆ ಇಲ್ಲ , ಬಾಲಿವುಡ್ ರೀಮೆಕ್ ಮಾಡುವುದರಲ್ಲಿ ನಿರತವಾಗಿದೆ , ರಾಜಕೀಯ ಥ್ರಿಲ್ಲರ್ ಗಳು, ಸೈಕೋ ಥ್ರಿಲ್ಲರ್ಗಳು, ಹಾರರ್ ಥ್ರಿಲ್ಲರ್ ಹೀಗೆ ಹಲವು ವಿಧಗಳಿವೆ. ಆದರೆ ಅವುಗಳ್ಯಾವುವನ್ನು ಬಾಲಿವುಡ್ ನ ಮಂದಿ ಎಕ್ಸ್ಪ್ಲೋರ್ ಮಾಡಿಯೇ ಇಲ್ಲ. ಸಾಕಷ್ಟು ಒರಿಜಿನಲ್ ಐಡಿಯಾಗಳಿವೆ ಆದರೆ ಅದೆಲ್ಲವನ್ನೂ ಬಿಟ್ಟು ರೀಮೇಕ್ ಮಾಡಲು ಹೊರಡುತ್ತಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.. ಸದ್ಯ ನಿತಿನ್ ಫಿರ್ಕಿ ಸಿನಿಮಾದಲ್ಲಿ ನಟಿಸಿದ್ದು ಈ ಸಿನಿಮಾ ಶೀಘ್ರದಲ್ಲೇ ರಿಲೀಸ್ ಆಗಲಿದೆ..