ಬೆಂಗಳೂರು: ಪರ್ಸ್ ಹುಡುಕಲು ಸಹಕರಿಸಲಿಲ್ಲ ಎಂಬ ಕಾರಣಕ್ಕೆ ವಿಮಾನ ಪ್ರಯಾಣಿಕರೊಬ್ಬರು ಬಾಂಬ್ ಬೆದರಿಕೆಯ ಕರೆ ಮಾಡಿರುವ ಘಟನೆ ನಡೆದಿದೆ.
ಸದ್ಯ ಈ ಆರೋಪಿ ಜೈಲು ಪಾಲಾಗಿದ್ದಾನೆ. ಆರೋಪಿಯು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (KIA) ಕಾಲ್ ಸೆಂಟರ್ ಗೆ ಬಾಂಬ್ ಬೆದರಿಕೆ ಕರೆ ಮಾಡಿದ್ದಾನೆ ಎನ್ನಲಾಗಿದೆ. ಈತ ವಿಮಾನದಲ್ಲಿ ದೆಹಲಿಯಿಂದ ಬೆಂಗಳೂರಿಗೆ ಬಂದಿದ್ದ ಚಾರ್ಮಿಯಾ ಎಂಬಾತನೇ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.
ಈತ ವಿಮಾನದಲ್ಲಿ ಪರ್ಸ್ ಕಳೆದುಕೊಂಡಿದ್ದ. ಆದರೆ, ಆತನಿಗೆ ಪರ್ಸ್ ಹುಡುಕಲು ಸಹಕರಿಸಲಿಲ್ಲ ಎಂಬ ಕಾರಣಕ್ಕೆ ಆರೋಪಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.