ಬೆಂಗಳೂರು: ನಗರದಲ್ಲಿನ 15ಕ್ಕೂ ಅಧಿಕ ಶಾಲೆಗಳಿಗೆ ಮತ್ತೊಮ್ಮೆ ಬಾಂಬ್ ಬೆದರಿಕೆಯ ಕರೆ ಬಂದಿದೆ. ಇ- ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಿದ್ದಾರೆ.
ಬಸವೇಶ್ವರ ನಗರದ ನ್ಯಾಪಲ್, ವಿದ್ಯಾಶಿಲ್ಪ ಸೇರಿದಂತೆ 15ಕ್ಕೂ ಅಧಿಕ ಶಾಲೆಗಳಿಗೆ ಬೆದರಿಕೆ ಬಂದಿದೆ. ಹೀಗಾಗಿ ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ. ಮಕ್ಕಳನ್ನು ಮನೆಗೆ ಕಳುಹಿಸಲಾಗಿದೆ. ಆತಂಕಗೊಂಡ ಪೋಷಕರು ಶಾಲೆಯ ಹತ್ತಿರ ಓಡೋಡಿ ಬಂದಿದ್ದಾರೆ.
ಈ ಹಿಂದೆಯೂ ನಾಲ್ಕು ಶಾಲೆಗಳಿಗೆ ಬಾಂಬ್ ಬೆದರಿಕೆಯ ಕರೆ ಬಂದಿತ್ತು.