ಶಾಲೆಗಳಿಗೆ ಬಾಂಬ್ ಬೆದರಿಕೆ | ಪ್ರಕರಣದ ತನಿಖೆ ಎಟಿಸಿ ಹೆಗಲಿಗೆ
ಬೆಂಗಳೂರು: ಏಪ್ರಿಲ್ 8 ರಂದು ಬೆಂಗಳೂರಿನ 6 ಶಾಲೆಗಳಿಗೆ ಬಾಂಬ್ ಇಟ್ಟಿರುವುದಾಗಿ ಇ-ಮೇಲ್ ಬಂದಿತ್ತು. ಇದರ ತನಿಕೆ ಪ್ರಾರಂಭಿಸಿದ ಪೊಲೀಸರಿಗೆ ಸಧ್ಯ ಮಹತ್ವದ ಮಾಹಿತಿ ಲಭ್ಯವಾಗಿದೆ.
ಈ ಬೆದರಿಕೆಯ ಹಿಂದೆ ಪಾಕಿಸ್ತಾನ, ಸಿರಿಯಾ ದೇಶದ ನಂಟು ಇದೆಯಾ ಎಂಬ ಅನುಮಾನ ಹೆಚ್ಚಾಗಿದು, ರಾಜ್ಯ ಗೃಹ ಇಲಾಖೆಗೆ ಸ್ಪೋಟಕ ಮಾಹಿತಿಯೊಂದು ಸಿಕ್ಕಿದೆ. ತಾಂತ್ರಿಕ ತನಿಕೆ ವೇಳೆ ಮಾಹಿತಿ ದೊರೆತಿದ್ದು, ದುಷ್ಕರ್ಮಿಗಳು Proxy Server ಬಳಸಿ ಮೇಲ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
8-10 Proxy Server ಬಳಸಿರುವುದರಿಂದ ಹಲವಾರು ಲೇಯರ್ಗಳಿವೆ. ಒಂದು ಲೇಯರ್ ಪತ್ತೆ ಮಾಡಿದರೆ, ಅದು ಇನ್ನೊಂದು ಲೇಯರ್ ಗೆ ಕನೆಕ್ಟ್ ಆಗುತ್ತೆ ಎಂಬ ಬಗ್ಗೆ ಮಾಹಿತಿ ಲಭಿಸಿದೆ. ಇಮೇಲ್ ಮೂಲ ಪತ್ತೆ ಹಚ್ಚಲು ಗೂಗಲ್ ಸಂಸ್ಥೆಗೆ ಪತ್ರ ಬರೆಯಲಾಗಿದೆ. ತನಿಕೆ ನಡೆಸುತ್ತಿರುವ ಪೊಲೀಸರಿಗೆ ಎಟಿಸಿಯಿಂದಲೂ ಸಾಥ್ ನೀಡಲಾಗುತ್ತಿದ್ದು, ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ ಪ್ರಕರಣದ ತನಿಖೆ ಎಟಿಸಿ ಹೆಗಲಿಗೆ ನೀಡಲಾಗಿದೆ.