Bombay HC : ಟೈರ್ ಸ್ಪೋಟ ದೇವರ ಪ್ರಮಾದವಲ್ಲ; ವಿಮಾ ಕಂಪನಿಗೆ 1.25 ಕೋಟಿ ಪರಿಹಾರಕ್ಕೆ ಕೋರ್ಟ್ ಆದೇಶ…
ಟೈರ್ ಸ್ಫೊಟಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಟೈರ್ ಕಂಪನಿಗೆ 1. 25 ಕೋಟಿ ಪಾವತಿಸುವಂತೆ ಬಾಂಬೆ ಹೈಕೋರ್ಟ್ ಆದೇಶಿಸಿದೆ. ಟೈರ್ ಬ್ಲಾಸ್ಟ್ ಆಗಿ ಅಪಘಾತದಲ್ಲಿ ಸಾವು ಸಂಭವಿಸಿದರೇ ಅದರು ದೈವಿಕ ಪ್ರಮಾದದ ವ್ಯಾಪ್ತಿಗೆ ಬರುವುದಿಲ್ಲ ಮತ್ತು ಅದನ್ನ ಮಾನವ ದೋಷ ಎಂದು ಪರಿಗಣಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಟೈರ್ ಸ್ಫೋಟಗೊಂಡು ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ 1.25 ಕೋಟಿ ರೂಪಾಯಿ ಪರಿಹಾರ ನೀಡುವಂತೆ ನ್ಯೂ ಇಂಡಿಯಾ ಇನ್ಶುರೆನ್ಸ್ ಕಂಪನಿಗೆ ಕೋರ್ಟ್ ಸೂಚಿಸಿದೆ.
ಮೋಟಾರು ಅಪಘಾತ ಕ್ಲೇಮ್ಸ್ ಟ್ರಿಬ್ಯೂನಲ್ ನೀಡಿದ ತೀರ್ಪನ್ನ ಬಾಂಬೆ ಹೈಕೋರ್ಟ್ ಎತ್ತಿ ಹಿಡಿದಿದೆ. ಅಕ್ಟೋಬರ್ 25, 2010 ರಂದು, ಮಕರಂದ್ ಪಟವರ್ಧನ್ (38) ಪುಣೆಯಿಂದ ಮುಂಬೈಗೆ ಕಾರಿನಲ್ಲಿ ಇತರರೊಂದಿಗೆ ಪ್ರಯಾಣಿಸುತ್ತಿದ್ದರು. ಆ ಕಾರು ಆತನ ಸ್ನೇಹಿತನದ್ದು. ಪಟವರ್ಧನ್ ಡ್ರೈವಿಂಗ್ ಮಾಡುತ್ತಿದ್ದಾಗ ಹಿಂಬದಿಯ ಟೈರ್ ಸ್ಪೋಟಗೊಂಡು ಕಾರು ಕಣಿವೆಗೆ ಬಿದ್ದು ಮೃತಪಟ್ಟಿದ್ದರು.
ಪಟವರ್ಧನ್ ಅವರ ಕುಟುಂಬ ಸದಸ್ಯರು ವಿಮಾ ಪರಿಹಾರವನ್ನ ನೀಡುವಂತೆ ನ್ಯೂ ಇಂಡಿಯಾ ಇನ್ಶುರೆನ್ಸ್ ಕಂಪನಿಗೆ ಆದೇಶಿಸುವಂತೆ ನ್ಯಾಯಾಲಯವನ್ನ ಸಂಪರ್ಕಿಸಿದ್ದರು. 2016 ರಲ್ಲಿ 1.25 ಕೋಟಿ ರೂ. ಪರಿಹಾರ ಪ್ರಶ್ನಿಸಿ ವಿಮಾ ಕಂಪನಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಆದರೆ, ಹೈಕೋರ್ಟ್ ಕೂಡ ನ್ಯಾಯಾಧಿಕರಣದ ತೀರ್ಪನ್ನು ಎತ್ತಿ ಹಿಡಿದಿದೆ.
Bombay HC : A tire burst is not God’s fault; Court orders compensation of 1.25 crores to insurance company